ದೂಪದಹಳ್ಳಿ ಬಳಿ ಮಹಿಷಿ ಮಠ ದರೋಡೆ ಆರೋಪಿ ಕಾಲಿಗೆ‌ ಗುಂಡು..!

ದೂಪದಹಳ್ಳಿ ಬಳಿ ಮಹಿಷಿ ಮಠ ದರೋಡೆ ಆರೋಪಿ ಕಾಲಿಗೆ‌ ಗುಂಡು..!
Facebook
Twitter
LinkedIn
WhatsApp

ಶಿಕಾರಿಪುರ ಪಟ್ಟಣದ ಪ್ರಗತಿ ನಗರದ ನಿವಾಸಿ ಆರೋಪಿ ಶ್ರೀನಿವಾಸ್ ಅವರ ಎಡಗಾಲಿಗೆ ಮಾಲೂರು ಪಿಎಸ್ಐ ಕುಮಾರ್ ಗುಂಡು ಹಾರಿಸಿದ್ದಾರೆ.

ಇತ್ತೀಚೆಗೆ ಮಾಲೂರು ಪಿಎಸ್ಐ ವ್ಯಾಪ್ತಿಯಲ್ಲಿ ನಡೆದ ಮಹಿಷಿ ಮಠದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ.ಆತನಿಗೂ ಅಪರಾಧ ಹಿನ್ನೆಲೆ ಇದೆ.

ಪಿಎಸ್ ಐ ಕುಮಾರ್ ಮತ್ತು ತಂಡ ಆರೋಪಿ ಶ್ರೀನಿವಾಸ್ ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಪೋಲಿಸ್ ಸಿಬ್ಬಂದಿ ಸಂತೋಷ್ ಮೇಲೆ ಆರೋಪಿ ದಾಳಿ ಮಾಡಲು ಯತ್ನಿಸಿದಾನೆ.

ಪದೇ ಪದೇ ಎಚ್ಚರಿಕೆ ನೀಡಿದ್ದರೂ ಶರಣಾಗದೆ ಮತ್ತೆ ದಾಳಿ ಮಾಡಲು ಯತ್ನಿಸಿದಾನೆ. ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ‌ ಎಚ್ಚರಿಕೆ ನೀಡಿದರು ಶರಣಾಗದಿದ್ದಾಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ಏನಿದು ಪ್ರಕರಣ

ಏಪ್ರಿಲ್ 6 ರಂದು ತೀರ್ಥಹಳ್ಳಿ ತಾಲೂಕಿನ ಮಹಿಷಿ ಮಠಕ್ಕೆ 12 ರಿಂದ 15 ಜನ ಡಕಾಯಿತರು ಮಾಸ್ಕನ್ನು ಧರಿಸಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಅಲ್ಲಿದ್ದ ಅರ್ಚಕರನ್ನು ಹೆದರಿಸಿ ಅವರ ಮೇಲೆ ಹಲ್ಲೆ ಮಾಡಿದರು. ಅಷ್ಟೇ ಅಲ್ಲದೆ ಸುಮಾರು 50 ಸಾವಿರ ನಗದು ಸೇರಿದಂತೆ ಇನ್ನಿತರೇ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದರು. ಹಾಗೆಯೇ ನಮಗೆ 300 ಕೋಟಿ ರೂಪಾಯಿ ಹಣ ಬೇಕು ಎಂದು ಅವಾಚ್ಯ ಶಬ್ದಗಳಿಂದ ಅರ್ಚಕರನ್ನು ಬೆದರಿಸಿದ್ದರು. ಈ ಹಿನ್ನಲೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳ್ಳರ ಬೇಟೆಗೆ ಸಿದ್ದವಾಗಿದ್ದ ಖಾಕಿಗೆ ಇಂದು ಮಹಿಷಿ ಡಕಾಯಿತಿ ಪ್ರಕರಣದಲ್ಲೊಬ್ಬನಾದ ಶಿಕಾರಿಪುರ ಪಟ್ಟಣದ ಶ್ರೀನಿವಾಸ್ ಸಿಕ್ಕಿದ್ದಾನೆ. ಅವನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮಾಡಲು ಯತ್ನಿಸಿದ್ದಾನೆ.

ಪೊಲೀಸರು ಪದೇ ಪದೆ ಆತನಿಗೆ ಎಚ್ಚರಿಕೆ ನೀಡಿದರೂ ಸಹ ಶರಣಾಗದ ಕಾರಣ ಮಾಳೂರು ಪಿಎಸ್ ಐ ಕುಮಾರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.