ಶಿಕಾರಿಪುರ: ಸರ್ಕಾರಿ ಪ್ರಥಮದರ್ಜೆ ಕಾಲೇಜು ತರೀಕೆರೆಯಲ್ಲಿ ನೆಡೆದ 2024 – 25ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಪುರುಷರ ಅಂತರ ಕಾಲೇಜು ದೇಹಧಾರ್ಡ್ಯತೆ ಸ್ಪರ್ದೆಯಲ್ಲಿ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪವನ್ ಜೆ.ಎಂ ತೃತೀಯ ಬಿ.ಎ.ನಲ್ಲಿ ವಿದ್ಯಾರ್ಥಿ ಪ್ರಥಮ ಸ್ಥಾನ ಗಳಿಸಿದ್ದಾನೆ.

ಅಂತರ್ ಕಾಲೇಜು ಮಟ್ಟದ 85 ಕೆ ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಬಂಗಾರದ ಪದಕ ಪಡೆದು ಕಾಲೇಜುಗೆ ಕೀರ್ತಿಯನ್ನು ತಂದಿರುತ್ತಾನೆ.

ಶಿಕಾರಿಪುರ ನಿವಾಸಿ ಬಸ್ ಏಜೆಂಟ್ ಮಂಜುನಾಥ ಅವರ ಪುತ್ರನಾಗಿದಾನೆ. ಈ ವರ್ಷದಲ್ಲಿ ಕುವೆಂಪು ವಿವಿಯಲ್ಲಿ ನೆಡೆದ ಕುಸ್ತಿ ಹಾಗೂ ಜೋಡೋ ಸ್ವರ್ದೆಗಳಲ್ಲಿ ನಮ್ಮ ಕಾಲೇಜಿನಿಂದ ಭಾಗವಹಿಸಿ ಎರಡೂ ಸ್ಪರ್ದೆಗಳಲ್ಲಿ ಬಂಗಾರದ ಪದಕದೊಂದಿಗೆ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಪ್ರತಿಭಾವಂತ ಕ್ರೀಡಾಪಟು. ಇವನ ಈ ಸಾಧನೆಗಾಗಿ ಕಾಲೇಜಿನಲ್ಲಿ ಸನ್ಮಾನಿಸಿದರು.

ಈ ವೇಳೆ ಪ್ರಾಂಶುಪಾಲರಾದ ಡಾ.ರಮೇಶ್ ದೈಹಿಕ ಶಿಕ್ಷಣ ನಿರ್ದೇಶಕರಾದ ನಾರಾಯಣ್, ಹರೀಶ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ವಿನಯ್ ಆರ್ ಕೆ, ಪಟ್ಟಣ ರಾಕೇಶ್, ಮಾರುತಿ ಜಿ, ವೀರನಗೌಡ್ರು ಇದ್ದರು.
ಸುದ್ದಿ ಜಾಹೀರಾತಿಗಾಗಿ-7411515737