ಚಿಕ್ಕಮಗಳೂರು : ಜಿಲ್ಲೆಯ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ.

ಮುಳ್ಳಯ್ಯನಗಿರಿ, ಸೀತಾಳ್ಳಯ್ಯನಗಿರಿ ಪರ್ವತದಲ್ಲಿ ಬೆಂಕಿ ಹೊತ್ತಿಕೊಂಡಿದ್ದು 15 ಕಿಲೋ ಮೀಟರ್ ಗು ಹೆಚ್ಚು ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ ಸ್ಥಳಕ್ಕೆ ಅಗ್ನಿ ಶಾಮಕದಳ, ಅರಣ್ಯ ಇಲಾಖೆ ಸಿಬ್ಬಂದಿಗಳು ತೆರಳಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು ಬೆಂಕಿ ಸಂಪೂರ್ಣ ನಂದಿಸಲು ಸಾಧ್ಯವಾಗಿಲ್ಲ.

ಬೆಂಕಿಯಿಂದಾಗಿ ಈ ಪರ್ವತದಲ್ಲಿರುವ ಅಪರೂಪದ ಔಷಧಿಗುಣಗಳ ಸಸ್ಯ ಸಂಪತ್ತು,ಇತರೆ ಮರ ಗಿಡಗಳು ನಾಶವಾಗಿವೆ. ಇನ್ನು ಕಳೆದ 2 ವಾರಗಳಲ್ಲಿ ಜಿಲ್ಲೆಯ ಚಾರ್ಮಾಡಿ ಘಾಟ್, ಕಳಸ, ಮುಳ್ಳಯ್ಯನಗಿರಿ ಸೇರಿ 4 ನೇ ಕಾಡ್ಗಿಚ್ಚು ಪ್ರಕರಣ ಇದಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಈ ಭಾರಿ ಅರಣ್ಯ ನಸರಿ ಉಂಟಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ-7411515737