ಪಕ್ಷದಲ್ಲಿ ಏನೆಲ್ಲಾ ಡ್ಯಾಮೇಜ್ ಆಗಬೇಕು ಎಲ್ಲಾವೂ ಆಗಿದೆ: ಬಿವೈ ವಿಜಯೇಂದ್ರ

ಪಕ್ಷದಲ್ಲಿ ಏನೆಲ್ಲಾ ಡ್ಯಾಮೇಜ್ ಆಗಬೇಕು ಎಲ್ಲಾವೂ ಆಗಿದೆ: ಬಿವೈ ವಿಜಯೇಂದ್ರ
Facebook
Twitter
LinkedIn
WhatsApp

ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಕ್ಷಕ್ಕೆ ಏನೆಲ್ಲಾ ಡ್ಯಾಮೇಜ್ ಆಗಬೇಕು ಎಲ್ಲಾ‌ ಆಗಿದೆ ಇನ್ನೊಂದು ವಾರದಲ್ಲಿ ರಾಜ್ಯಾಧ್ಯಕ್ಷರು ಯಾರು ಆಗಲಿದ್ದಾರೆ ಎಲ್ಲಾ ತಿಳಿಯಲಿದೆ.

ಬಿಜೆಪಿ ಯತ್ನಲ್ ಬಣದಿಂದ ದೆಹಲಿ ಪ್ರವಾಸ ಕೈಗೊಂಡಿದ್ದು ಇಂದು ಬಿಜೆಪಿ ಹೈ ಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು‌ ವರ್ಷದಿಂದ ನಾನು ಯಾರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಪಕ್ಷಕ್ಕೆ ನಿಷ್ಠನಾಗಿ ದುಡಿಯುತ್ತಿದ್ದೇನೆ.
ಇನ್ನೋಂದು ವಾರ ಅಥವಾ 10 ದಿನಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿದ್ದು ಎಲ್ಲಾವೂ ಸರಿಯಾಗಲಿದೆ ಎಂದು ಎಂದು ನನಗೆ ವಿಶ್ವಾಸ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಸುದ್ದಿ ಜಾಹೀರಾತಿಗಾಗಿ-7411515737