ಪೋಲೀಸ್ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಇಲ್ಲಿದೆ ಮಾಹಿತಿ..!

ಪೋಲೀಸ್ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ ಇಲ್ಲಿದೆ ಮಾಹಿತಿ..!
Facebook
Twitter
LinkedIn
WhatsApp

ಬೆಂಗಳೂರು: ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಪೇದೆಗಳಿಂದ ಡಿವೈಎಸ್ಪಿ ಹುದ್ದೆವರೆಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇಖಡ 2 ರಿಂದ ಶೇಖಡ 3 ಕ್ಕೆ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ.

ಕರ್ನಾಟಕ ಸೇವಾ ಆಯೋಗ ತಿದ್ದುಪಡಿ ನಿಯಮಗಳು 2024 ರ ಕರಡನ್ನು ಸಂವಿಧಾನದ ಅನುಚ್ಛೇದ 318ರ ಅನ್ವಯ ರಾಜ್ಯಪಾಲರ ಅನುಮೋದನೆ ಪಡೆದು ರಾಜ್ಯಪತ್ರದಲ್ಲಿ ಪ್ರಕಟಿಸಿ, ಸಲಹೆಗಳನ್ನು ಆಹ್ವಾನಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಕರಡು ನಿಯಮಗಳಲ್ಲಿ ಯಾವುದೇ ಪ್ರಮುಖ ತಿದ್ದುಪಡಿಗಳನ್ನು ಮಾಡುವ ಅವಶ್ಯಕತೆ ಇಲ್ಲದಿದ್ದಲ್ಲಿ, ನಿಯಮಗಳನ್ನು ಪುನ: ಸಚಿವ ಸಂಪುಟ ಮುಂದೆ ಮಂಡಿಸದೇ, ಅಂತಿಮಗೊಳಿಸಲು ಇಂದು ನಿರ್ಧರಿಸಲಾಗಿದೆ.

ಸುದ್ದಿ‌ ಮತ್ತು‌ ಜಾಹೀರಾತಿಗಾಗಿ-7411515737