ತಂಗಿಗೆ ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್​ ಕಳಿಸುತ್ತಿದ್ದನಿಗೆ ಅಣ್ಣನಿಂದ ಧರ್ಮದೇಟು

ತಂಗಿಗೆ ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ಮೆಸೇಜ್​ ಕಳಿಸುತ್ತಿದ್ದನಿಗೆ ಅಣ್ಣನಿಂದ ಧರ್ಮದೇಟು
Facebook
Twitter
LinkedIn
WhatsApp


ನೆಲಮಂಗಲ: ಇನ್​ಸ್ಟಾಗ್ರಾಂನಲ್ಲಿ ಯುವತಿಗೆ ಅಶ್ಲೀಲ ಮೆಸೇಜ್​ ಕಳಿಸುತ್ತಿದ್ದನಿಗೆ ಯುವತಿ ಅಣ್ಣನಿಂದ ಧರ್ಮದೇಟು ನೀಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸತೀಶ್​ಗೆ ಯುವತಿ ಅಣ್ಣ ರಮೇಶ್​ನಿಂದ ಹಲ್ಲೆ ಮಾಡಲಾಗಿದೆ. ನೆಲಮಂಗಲ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತೀಶ್ ಇನ್​ಸ್ಟಾಗ್ರಾಂನಲ್ಲಿ ಯುವತಿಗೆ ಅಶ್ಲೀಲ ಮೆಸೇಜ್​ ಕಳಿಸುತ್ತಿದ್ದ. ಯುವತಿ ಮೊಬೈಲ್​ನಿಂದ ಲೊಕೇಷನ್ ಹಾಕಿದ್ದ ಅಣ್ಣ ರಮೇಶ್, ಕೆಂಪಲಿಂಗನಹಳ್ಳಿ ಬಂದಾಗ ಏಕಾಏಕಿ ಮುಖಕ್ಕೆ ಗುದ್ದಿ ತೀವ್ರ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸತೀಶ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಲ್ಲೆಗೈದು ಪರಾರಿಯಾದ ರಮೇಶ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪತಿಯ ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಪತ್ನಿ ಹಾಗೂ ಮನೆಯವರಿಗೆ ಚಾಕುವಿನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪದಲ್ಲಿ ನಡೆದಿದೆ.

ಪತ್ನಿ ಮುಮ್ತಾಜ್, ಪತ್ನಿಯ ತಾಯಿ ಶಬೀನ, ಅಣ್ಣ ಅರ್ಬಜ್​ಗೆ ಪತಿ ಅಜರುದ್ದೀನ್ ಚಾಕು ಇರಿದಿದ್ದಾರೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ವೇಳೆ ಪತ್ನಿ ಮನೆಯವರಿಂದ ಅಜರುದ್ದೀನ್ ಮೇಲೆ ಹಲ್ಲೆ ಮಾಡಲಾಗಿದೆ. ಯುವತಿ ಸೀಮಾ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಜರುದ್ದೀನ್, ಇದೇ ವಿಷಯವಾಗಿ ಪರಸ್ಪರ ಬಡಿದಾಡಿಕೊಂಡು ಆಸ್ಪತ್ರೆ ಸೇರಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.