ಚಿಕ್ಕಮಗಳೂರು: ಲಾರಿ ಸಮೇತ ಕೋಟ್ಯಂತರ ಮೌಲ್ಯದ ಅಡಿಕೆ (Areca Nut) ಕಳ್ಳತನ ಮಾಡಿದ್ದ ಐವರು ಅಂತರ್ ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 10552500 ಮೌಲ್ಯದ 335 ಚೀಲ ಅಡಿಕೆ ಕಳ್ಳತನ ಮಾಡಿದ್ದರು. ಹಮ್ಜ, ಮೊಹಮ್ಮದ್ ಗೌಸ್ ಖಾನ್, ಮೊಹಮ್ಮದ್ ಸುಭಾನ್, ಮೊಹಮ್ಮದ್ ಫಯಾಜ್ ಮತ್ತು ಮೊಹಮ್ಮದ್ ಸಾದಿಕ್ ಬಂಧಿತರು. ಬಂಧಿತರಿಂದ 1 ಕೋಟಿ ರೂ. ಗೂ ಅಧಿಕ ಮೌಲ್ಯದ ಅಡಕೆ, 12 ಚಕ್ರದ ಲಾರಿ ಮತ್ತು 2.30 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ದುಲಾರಾಮ್ ಎಂಬುವವರಿಗೆ ಅಡಕೆ ಸೇರಿತ್ತು.
ಬೀರೂರಿನಿಂದ ಲಾರಿಯಲ್ಲಿ ಗುಜರಾತ್ಗೆ 335 ಚೀಲ ಅಡಿಕೆ ಹೋಗಬೇಕಿತ್ತು. ಆದರೆ ಈ ಮಧ್ಯೆ ಲಾರಿ ಸಮೇತ ಚಾಲಕ ಎಸ್ಕೇಪ್ ಆಗಿದ್ದ. 335 ಚೀಲದ 24,500 ಕೆ.ಜಿ ಅಡಕೆಯನ್ನು ಕಳ್ಳರು ಕಳ್ಳತನ ಮಾಡಿದ್ದರು. ಬಳಿಕ ಗುಜರಾತ್ ಬದಲು ಹೊಳಲ್ಕೆರೆಯಲ್ಲಿ ಅನ್ಲೌಡ್ ಮಾಡಿ ಎಸ್ಕೇಪ್ ಆಗಿದ್ದಾರೆ. ಬೀರೂರು ಪೊಲೀಸರಿಂದ ಕಾರ್ಯಾಚರಣೆ ಮಾಡಿ ಬೆಂಗಳೂರಿನಲ್ಲಿ ಲಾರಿ ಚಾಲಕ ಸೇರಿ ಐವರನ್ನು ಬಂಧಿಸಿದ್ದಾರೆ. ಹಾಸನ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲೂ ಆರೋಪಿಗಳು ಕಳ್ಳತನ ಮಾಡಿದ್ದರು.
ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಹುಟ್ಟು ಹಬ್ಬದ ದಿನವೇ ಬಂಧಿಸಿದ್ದಾರೆ. ಆನಂದ್ ಬಂಧಿತ ಆರೋಪಿ. ಬಂಧಿತನಿಂದ 15 ಕ್ಕೂ ಹೆಚ್ಚು ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಯಿಂದ ಡ್ಯೂಟಿಗೆ ಹೋಗುವಂತೆ ರೆಡಿಯಾಗಿ ಹೋಗುತ್ತಿದ್ದ.