​ಶಿವಮೊಗ್ಗದಲ್ಲಿ ಮಾದಕ ವಸ್ತುಗಳೇ ದುರ್ಘಟನೆಗೆ ಮೂಲ: ಶಾಸಕ ಚನ್ನಬಸಪ್ಪ

​ಶಿವಮೊಗ್ಗದಲ್ಲಿ ಮಾದಕ ವಸ್ತುಗಳೇ ದುರ್ಘಟನೆಗೆ ಮೂಲ: ಶಾಸಕ ಚನ್ನಬಸಪ್ಪ
Facebook
Twitter
LinkedIn
WhatsApp

​ಶಿವಮೊಗ್ಗದಲ್ಲಿ ಮಾದಕ ವಸ್ತುಗಳೇ ದುರ್ಘಟನೆಗೆ ಮೂಲ: ಶಾಸಕ ಚನ್ನಬಸಪ್ಪ ಕಳವಳ

ಶಿವಮೊಗ್ಗ ​ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ದುರ್ಘಟನೆಗಳಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳು ಮಾದಕ ವಸ್ತುಗಳನ್ನು ಸೇವಿಸುತ್ತಿರುವುದೇ ಮುಖ್ಯ ಕಾರಣ ಎಂದು ಶಾಸಕ ಚನ್ನಬಸಪ್ಪ ಗಂಭೀರ ಆರೋಪ ಮಾಡಿದ್ದಾರೆ.

​ನಗರದಲ್ಲಿ ಮಾತನಾಡಿದ ಅವರು, ಗಾಂಜಾ ಸೇವನೆಯಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ಬಾಲಾಪರಾಧಿಗಳಲ್ಲಿ ಹೆಚ್ಚಿನವರು 10ನೇ ತರಗತಿ ಮುಗಿಸಿದವರಾಗಿದ್ದಾರೆ. ಇನ್ನೂ ಕೆಲವರು 8 ಮತ್ತು 9ನೇ ತರಗತಿಯಲ್ಲಿ ಉತ್ತೀರ್ಣರಾಗದೆ ಶಾಲೆಯಿಂದ ಹೊರಬಂದವರಾಗಿದ್ದು, ಇಂತಹ ಘಟನೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

​ಕೊಲೆ ಪ್ರಕರಣದ ಉಲ್ಲೇಖ
​ಸೂಳೆಬೈಲು ಗ್ರಾಮದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಯೊಬ್ಬನ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಶಾಸಕರು, ಈ ಕೃತ್ಯ ಎಸಗಿದವರೂ ಸಹ ಅಪ್ರಾಪ್ತ ಬಾಲಕರೇ ಆಗಿದ್ದಾರೆ ಎಂದರು. ಅಲ್ಲದೆ, ನಗರದ ಹಲವೆಡೆ ಕಲ್ಲು ತೂರಾಟದಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

​ಪ್ರಚೋದನೆ ನೀಡುವವರ ವಿರುದ್ಧ ಆಕ್ರೋಶ
​ಕೆಲವು ಕಿಡಿಗೇಡಿಗಳು ಅಪ್ರಾಪ್ತ ಬಾಲಕರನ್ನು ದಾಳವಾಗಿ ಬಳಸಿಕೊಂಡು ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಇಂತಹ ಕೃತ್ಯಗಳಲ್ಲಿ ಕೆಲವು ಮುಸ್ಲಿಂ ಯುವಕರು ಭಾಗಿಯಾಗಿರುವ ಆರೋಪಗಳಿದ್ದು, ಮುಸ್ಲಿಂ ಸಮಾಜವು ಎಚ್ಚೆತ್ತುಕೊಂಡು ಇಂತಹ ಪ್ರಚೋದನೆ ನೀಡುವವರನ್ನು ಗುರುತಿಸಬೇಕು ಎಂದು ಅವರು ಆಗ್ರಹಿಸಿದರು.

ಮಾದಕ ವಸ್ತುಗಳ ಪ್ರಕರಣಗಳಲ್ಲಿ ಪೊಲೀಸರು ಕೇವಲ ಹಿಂದೂಗಳನ್ನು ಮಾತ್ರ ಗುರಿಯಾಗಿಸುತ್ತಿದ್ದಾರೆ ಎಂದು ಶಾಸಕರು ದೂರಿದ್ದಾರೆ. ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆದರೂ ದೂರು ನೀಡದಂತೆ ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ.

“ಅಪ್ರಾಪ್ತರು ಎಂಬ ಕಾರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳದೆ ಸುಮ್ಮನಾಗುತ್ತಿದ್ದಾರೆ. ಇದರಿಂದ ಮುಂದೆ ಇನ್ನಷ್ಟು ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.