ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ
Facebook
Twitter
LinkedIn
WhatsApp

ಶಿವಮೊಗ್ಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು 2025-26 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಸಂಸ್ಥೆಗಳಿಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.

ಎನ್‌ಪಿಪಿಸಿಡಿ ವಿಭಾಗದಲ್ಲಿ ಇಎನ್‌ಟಿ ಸರ್ಜನ್‌ನ 1 ಹುದ್ದೆ ಖಾಲಿ ಇದ್ದು, ಎಂಎಸ್ ಇಎನ್‌ಟಿ/ಡಿಪ್ಲೊಮಾ ಎನ್ ಇಎನ್‌ಟಿ ವಿದ್ಯಾರ್ಹತೆ ಹೊಂದಿರಬೇಕು. ಎಂಹೆಚ್ ಐಸಿಯು-ಹೆಚ್‌ಡಿಯು ವಿಭಾಗದಲ್ಲಿ ಅರವಳಿಕೆ ತಜ್ಞರ 1 ಹುದ್ದೆ ಖಾಲೆ ಇದ್ದು, ಡಿಎ/ಡಿಎನ್‌ಬಿ/ಹೆಚ್‌ಡಿಯು ವಿದ್ಯಾರ್ಹತೆ ಹೊಂದಿರಬೇಕು. ಎಂಹೆಚ್ ವಿಭಾಗದಲ್ಲಿ ಪ್ರಸೂತಿ ಮತ್ತು ಸ್ತಿçà ರೋಗ ತಜ್ಞರು 1 ಹುದ್ದೆ ಖಾಲಿ ಇದ್ದು, ಡಿಜಿಓ/ಡಿಎನ್‌ಬಿ/ ಎಂಡಿ(ಓಬಿಜಿ) ವಿದ್ಯಾರ್ಹತೆ ಹೊಂದಿರಬೇಕು. ಸಿಹೆಚ್, ಎನ್‌ಆರ್‌ಸಿ, ಐಸಿಯು-ಹೆಚ್‌ಡಿಯು, ಎಂಹೆಚ್ ಐಸಿಯು-ಹೆಚ್‌ಡಿಯು, ಪಿಎಂ-ಎಭೀಮ್ ನಮ್ಮ ಕ್ಲಿನಿಕ್, ಎನ್‌ಯುಹೆಚ್‌ಎಂ ವಿಭಾಗದಲ್ಲಿ ಎಂಬಿಬಿಎಸ್ ವೈದ್ಯರ 15 ಹುದ್ದೆಗಳು ಖಾಲಿ ಇದ್ದು, ಎಂಬಿಬಿಎಸ್ ಉತ್ತೀರ್ಣರಾಗಿರಬೇಕು ಮತ್ತು ಕಡ್ಡಾಯವಾಗಿ ಇಂಟರ್ನಶಿಷ್ ಪೂರೈಸಿರಬೇಕು ಹಾಗೂ ಕೆಎಂಸಿಯ ನೋಂದಣಿಯನ್ನು ಹೊಂದಿರತಕ್ಕದ್ದು, ಸಂಬಂಧಪಟ್ಟ ವಿಶ್ವವಿದ್ಯಾಯದಿಂದ ಕಾನ್ವಕೇಷನ್/ಡಿಗ್ರಿ ಸರ್ಟಿಫಿಕೇಟ್ ಕಡ್ಡಾಯವಾಗಿ ಹೊಂದಿರಬೇಕು.

ಅರ್ಜಿ ನಮೂನೆಯನ್ನು ಜೂ.30 ರಂದು ಬೆಳಿಗ್ಗೆ 10.30 ರಿಂದ ಮದ್ಯಾಹ್ನ 1.30 ರವರೆಗೆ ಎನ್‌ಹೆಚ್‌ಎಂ ವಿಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಹೆಚ್ ರಸ್ತೆ ಇಲ್ಲಿ ನೀಡಲಿದ್ದು, ಅದೇ ದಿನ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಸಂಜೆ 5.30 ರವರೆಗೆ ನಡೆಸಲಾಗುವುದು. ಹಾಗೂ ಪ್ರತಿ ಸೋಮವಾರ ತಜ್ಞ ವೈದ್ಯರು ಮತ್ತು ವೈದ್ಯರ ಹುದ್ದೆಗಳ ಭರ್ತಿ ಆಗುವವರೆಗೆ ನೇರ ಸಂದರ್ಶನ ಮಾಡಲಾಗುತ್ತದೆ. ಸಂಬಂಧಪಟ್ಟ ಹುದ್ದೆಯ ಸ್ವಯಂ ದೃಢೀಕರಿಸಿದ ದಾಖಲೆಗಳ ನಕಲು ಪ್ರತಿ, ಇತ್ತೀಚಿನ ಭಾವಚಿತ್ರ, 2-5 ವರ್ಷಗಳ ಅನುಭವ ಪ್ರಮಾಣ ಪತ್ರ, ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಖಾಯಂ ವಿಳಾಸ ಮತ್ತು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು.

ತಜ್ಞ ವೈದ್ಯರು ಮತ್ತು ವೈದ್ಯರು ದೈಹಿಕವಾಗಿ ಎಲ್ಲಾ ಕರ್ತವ್ಯಗಳನ್ನು ನಿಭಾಯಿಸಲು ಅರ್ಹರಿರಬೇಕು ಹಾಗೂ ದೈಹಿಕ ಪ್ರಮಾಣ ಪತ್ರ ನೀಡುವುದು ಮತ್ತು ಕೆಎಂಸಿ ನೋಂದಣಿಯನ್ನು ಹೊಂದಿರತಕ್ಕದ್ದು.

ಸರ್ಕಾರದ ನಿಯಮಾವಳಿಯಂತೆ ಎನ್‌ಹೆಚ್‌ಎಂ/ಎನ್‌ಯುಹೆಚ್‌ಎಂ/ಪಿಎಂ-ಅಭೀಮ್ ನಮ್ಮ ಕ್ಲಿನಿಕ್ ಮಾರ್ಗಸೂಚಿಯಂತೆ ಹುದ್ದೆವಾರು ವಯೋಮಿತಿ ಪರಿಗಣಿಸಲಾಗುವುದು. ಎನ್‌ಹೆಚ್‌ಎಂ/ ಎನ್‌ಯುಹೆಚ್‌ಎಂ/ ಪಿಎಂ-ಅಭೀಮ್ ಮರ್ಗಸೂಚಿಯಂತೆ ಮೇರಿಟ್ ಕಂ ರೋಸ್ಟರ್ ಆಧಾರದ ಮೇಲೆ ಮೇಲಿನ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂ.ಸಂ:08182-200337 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಸಂಘದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

News By: Raghu Shikari-7411515737