ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಜೊತೆ ಇಂದಿರಾ ಆಹಾರ ಕಿಟ್ ವಿತರಣೆ..!

ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಜೊತೆ ಇಂದಿರಾ ಆಹಾರ ಕಿಟ್ ವಿತರಣೆ..!
Facebook
Twitter
LinkedIn
WhatsApp

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರಿಗೆ ಪೌಷ್ಟಿಕಾಂಶಗಳನ್ನು ಒಳಗೊಂಡ ಪದಾರ್ಥಗಳಿರುವ ‘ಇಂದಿರಾ ಆಹಾರ ಕಿಟ್’ಗಳನ್ನು ಪ್ರತಿ ತಿಂಗಳು ವಿತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ ಹಂಚಿಕೆ ಮಾಡುತ್ತಿರುವ 5 ಕೆ.ಜಿ ಅಕ್ಕಿಗೆ ಪರ್ಯಾಯವಾಗಿ ಈ ಕಿಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.

ಪಡಿತರ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಲು ಈ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ.

ಏನಿದು ಇಂದಿರಾ ಆಹಾರ್ ಕಿಟ್
ಪಡಿತರ ಅಕ್ಕಿ ಜೊತೆ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಇಂದಿರಾ ಕಿಟ್ ನಲ್ಲಿ 1ಕೆಜಿ ಸಕ್ಕರೆ, ಕಾಫಿ ಪುಡಿ 50 ಗ್ರಾಂ, 1ಕೆಜಿ ಉಪ್ಪು , 1 ಲೀಟರ್ ಅಡುಗೆ ಎಣ್ಣೆ, 2 ಕೆಜಿ ಗೋಧಿ,100 ಚಹಾ ಪುಡಿ, 1 ಕೆಜಿ ತೋಗರಿ ಬೇಳೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರ ಇಲಾಖೆ ಸಚಿವರಾದ ಕೆ.ಹಚ್ ಮುನಿಯಪ್ಪ ತಿಳಿಸಿದ್ದಾರೆ.

News By: Raghu Shikari-7411515737