ಸಚಿವ ಸತೀಶ ಜಾರಕಿಹೊಳಿಗೆ ಕಾಂಗ್ರೆಸ್ ನಿಂದ ನೋಟಿಸ್: ಸುರ್ಜೇವಾಲ ಸ್ಪಷ್ಟನೆ

ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿಗೆ ಕಾಂಗ್ರೆಸ್ ನಿಂದ ನೋಟಿಸ್ ನೀಡಲಾಗಿದೆ ಎಂಬ ವಿಚಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದ ಅವರು ನನಗೆ ಗೊತ್ತಿಲ್ಲ ಯಾರೂ ಈ ವದಂತಿಗಳನ್ನೆಲ್ಲ ಹಬ್ಬಿಸುತ್ತಿದ್ದಾರೆ ಎಂದು, ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ ಅಲ್ಲದೆ ಬಿಜೆಪಿ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದು ಹೇಳಿದ್ದಾರೆ. ಬೆಳಗಾವಿಯ ಐತಿಹಾಸಿಕ ಭೂಮಿಯ ಜೊತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ […]
ಮಾಲಾಶ್ರೀ ಅಭಿನಯದ ‘ಮಾರಕಾಸ್ತ್ರ’ ಸಿನಿಮಾ ಈಗ ಒಟಿಟಿ ಪ್ಲೇಯರ್ನಲ್ಲಿ ಲಭ್ಯ

ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದಿದ್ದರೆ ಒಟಿಟಿಯಲ್ಲಿ ವೀಕ್ಷಿಸಲು ಪ್ರೇಕ್ಷಕರು ಬಯಸುತ್ತಾರೆ. ಆದರೆ ಎಲ್ಲ ಸಿನಿಮಾಗಳಿಗೂ ಒಟಿಟಿಯಲ್ಲಿ ಜಾಗ ಸಿಗುವುದಿಲ್ಲ. ಸಣ್ಣ ಸಿನಿಮಾಗಳು ಎಂಬ ಕಾರಣಕ್ಕೆ ದೊಡ್ಡ ಒಟಿಟಿ ಸಂಸ್ಥೆಗಳು ಕೆಲವು ಚಿತ್ರಗಳನ್ನು ಖರೀದಿಸುವುದೇ ಇಲ್ಲ. ಮುಖ್ಯವಾಗಿ ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ. ಅದಕ್ಕಾಗಿ ಸಿನಿಮಾ ತಂಡಗಳು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಕನ್ನಡದ ‘ಮಾರಕಾಸ್ತ್ರ’ ಸಿನಿಮಾ ಕೂಡ ಈಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಹಾಗಂತ ಇದು ನೆಟ್ಫ್ಲಿಕ್ಸ್, ಅಮೇಜಾನ್ […]