ಮಾಲಾಶ್ರೀ ಅಭಿನಯದ ‘ಮಾರಕಾಸ್ತ್ರ’ ಸಿನಿಮಾ ಈಗ ಒಟಿಟಿ ಪ್ಲೇಯರ್​ನಲ್ಲಿ ಲಭ್ಯ

ಮಾಲಾಶ್ರೀ ಅಭಿನಯದ ‘ಮಾರಕಾಸ್ತ್ರ’ ಸಿನಿಮಾ ಈಗ ಒಟಿಟಿ ಪ್ಲೇಯರ್​ನಲ್ಲಿ ಲಭ್ಯ
Facebook
Twitter
LinkedIn
WhatsApp


ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದಿದ್ದರೆ ಒಟಿಟಿಯಲ್ಲಿ ವೀಕ್ಷಿಸಲು ಪ್ರೇಕ್ಷಕರು ಬಯಸುತ್ತಾರೆ. ಆದರೆ ಎಲ್ಲ ಸಿನಿಮಾಗಳಿಗೂ ಒಟಿಟಿಯಲ್ಲಿ ಜಾಗ ಸಿಗುವುದಿಲ್ಲ.

ಸಣ್ಣ ಸಿನಿಮಾಗಳು ಎಂಬ ಕಾರಣಕ್ಕೆ ದೊಡ್ಡ ಒಟಿಟಿ ಸಂಸ್ಥೆಗಳು ಕೆಲವು ಚಿತ್ರಗಳನ್ನು ಖರೀದಿಸುವುದೇ ಇಲ್ಲ. ಮುಖ್ಯವಾಗಿ ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ. ಅದಕ್ಕಾಗಿ ಸಿನಿಮಾ ತಂಡಗಳು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಕನ್ನಡದ ‘ಮಾರಕಾಸ್ತ್ರ’ ಸಿನಿಮಾ ಕೂಡ ಈಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಹಾಗಂತ ಇದು ನೆಟ್​ಫ್ಲಿಕ್ಸ್​, ಅಮೇಜಾನ್ ಪ್ರೈ ವಿಡಿಯೋ ಮುಂತಾದ ಪ್ಲಾಟ್​ಫಾರ್ಮ್​ಗಳಲ್ಲಿ ಲಭ್ಯವಿಲ್ಲ. ಬದಲಿಗೆ ‘ಒಟಿಟಿ ಪ್ಲೇಯರ್​’ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ವೆಬ್‌ಸೈಟ್‌ ಮೂಲಕ ಈ ಸಿನಿಮಾವನ್ನು ನೋಡಬಹುದು. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

2023ರಲ್ಲಿ ‘ಮಾರಾಕಾಸ್ತ್ರ’ ಸಿನಿಮಾ ತೆರೆಕಂಡಿತ್ತು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಆನಂದ್ ಆರ್ಯ, ಮಾಧುರ್ಯ, ಮಾಲಾಶ್ರೀ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಮಿಸ್​ ಮಾಡಿಕೊಂಡವರು ಈಗ ಒಟಿಟಿ ಪ್ಲೇಯರ್​ ಮೂಲಕ ಈ ಸಿನಿಮಾವನ್ನು ವೀಕ್ಷಿಸಬಹುದು. ಆದರೆ ಇದು ಉಚಿತ ಏನಲ್ಲ. ಚಿಕ್ಕ ಮೊತ್ತ ನೀಡಿದರೆ ಸಿನಿಮಾ ಲಭ್ಯವಾಗುತ್ತದೆ.