ಶಿಕಾರಿಪುರ :ಉಳ್ಳಿ ಫೌಂಡೇಶನ್ ವತಿಯಿಂದ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ…!

ಶಿಕಾರಿಪುರ :ಉಳ್ಳಿ ಫೌಂಡೇಶನ್ ವತಿಯಿಂದ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ…!

ಶಿಕಾರಿಪುರ : ದೇಶದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಜನ್ಮದಿನದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಹರಗಿ ಸರ್ಕಾರಿ ಶಾಲೆಯ ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಫೌಂಡೇಶನ್ ನ ಅದ್ಯಕ್ಷರು, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ-ಕಾರ್ಯದರ್ಶಿ ಉಳ್ಳಿ ದರ್ಶನ್ ಈ ದೇಶದ 6 ನೇ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿಯವರು ದೇಶದ ಶಕ್ತಿ ಯುವ ಶಕ್ತಿ ಎಂದು ಭಾವಿಸಿ ರಾಷ್ಟೀಯ ಶಿಕ್ಷಣ ಖಾಯ್ದೆ ಜಾರಿಗೆ ತಂದರು.

“ಜವಹಾರ್ ನವೋದಯ ವಿದ್ಯಾಲಯ”ಗಳನ್ನು ಆರಂಭಿಸಿ ಮಕ್ಕಳಿಗೆ 6-12ನೇ ತರಗತಿಯ ವರೆಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಪ್ರಾರಂಭಿಸಿದರು ಹಾಗು 1986ರಲ್ಲಿ MTNL ಪ್ರಾರಂಭಿಸಿ ದೇಶದಾದ್ಯಂತ ಟೆಲಿಫೋನ್ ಕ್ರಾಂತಿ ಪ್ರಾರಂಭಿಸಿ ಹಾಗೆ ೧೮ ವರ್ಷದ ಯುವ ಶಕ್ತಿಗೆ ಮತದಾನದ ಹಕ್ಕನ್ನು ನೀಡಿದ್ದರು.

ಅವರ ಹುಟ್ಟು ಹಬ್ಬ ವನ್ನು ಅರ್ಥ ಪೂರ್ಣವಾಗಿ ಆಚರಿಸುವ ಸಲುವಾಗಿ ಶಿಕಾರಿಪುರ ತಾಲ್ಲೂಕಿನ ಹರಿಗೆ ಸರ್ಕಾರಿ ಶಾಲೆಯ ಮಕ್ಕಳು ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ಉಮೇಶ್ ಕೋಡಿಹಳ್ಳಿ, ಶೇಖರಪ್ಪ ಗೌಡ್ರು, ಲಿಂಗರಾಜ್, ಚೇತನ್, ಕೇಶವಮೂರ್ತಿ, ದಯಾನಂದ ಗಾಮ, ರೇಣುಕಯ್ಯ, ಗಣೇಶ್, ರಾಜು ಉಡುತಡಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

News by: Raghu Shikari,-7411515737

Admin

Leave a Reply

Your email address will not be published. Required fields are marked *

error: Content is protected !!