ಶ್ರೀಗುರು ರೇವಣಸಿದ್ದೇಶ್ವರ ಹಾಲುಮತ ಮಹಾದ್ವಾರ ಗುದ್ದಲಿ ಪೂಜೆ
ಶಿಕಾರಿಪುರ ಪಟ್ಟಣದ ದೊಡ್ಡ ಕೇರಿಯಲ್ಲಿ ಎಸ್ ಎಸ್ ಮುಖ್ಯ ರಸ್ತೆಯ ಮುಂಭಾಗ ಶ್ರೀ ಗುರು ರೇವಣಸಿದ್ದೇಶ್ವರ ಹಾಲುಮತ ಮಹಾದ್ವಾರದ ಗುದ್ದಲಿ ಪೂಜೆಯನ್ನು ಶುಕ್ರವಾರ ಕನಕಗುರು ಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಯವರು ನೆರವೇರಿಸಿದರು.
ಪಟ್ಟಣದ ದೊಡ್ಡ ಕೇರಿಯಲ್ಲಿ ಶ್ರೀ ಗುರು ರೇವಣ್ಣ ಆರಾಧ್ಯ ಹಾಲುಮತ ದೈವ ಬಳಗ ದೊಡ್ಡಕೇರಿ ಇವರ ವತಿಯಿಂದ ಧರ್ಮಸಭೆ ಹಾಗೂ ಶ್ರೀ ಗುರು ರೇವಣಸಿದ್ದೇಶ್ವರ ಹಾಲುಮತ ಮಹಾದ್ವಾರ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮುಗಳಗೇರೆ ಮಹೇಶ್ವರಪ್ಪ,ಉಪಾಧ್ಯಕ್ಷರಾದ ಬಂತೇರ್ ದಶರಥಪ್ಪ,ಕುಬೇರಪ್ಪ ,ಚನ್ನೇಶ್ ಮಟ್ಟೇರ್,ತಾಲ್ಲೂಕು ಕುರುಬ ಸಮಾಜದ ಗೌರವ ಅಧ್ಯಕ್ಷರಾದ ನಗರದ ಮಹಾದೇವಪ್ಪ ಉಪಾಧ್ಯಕ್ಷರಾದ ಗೋಣಿ ಮಾಲತೇಶ್,ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾದ ಕಬಾಡಿ ರಾಜಣ್ಣ, ಪುರಸಭಾ ಸದಸ್ಯರಾದ ಪ್ರಶಾಂತ್ ಜೀನಳ್ಳಿ ,ಜಯಶ್ರೀ, ಹಾಗೂ ಜೀನಳ್ಳಿ ಹಳದಪ್ಪ ಮಟ್ಟೇರ್ ಗಿಡಪ್ಪ,ರತೀಶ್ ಕಟಿಗಿ , ಚೇತನ್ ಬಂತೇರ್, ಸಮಾಜದವರು ಉಪಸ್ಥಿತರಿದ್ದರು.