ಶಿಕಾರಿಪುರ:ಕಾಲಾವಕಾಶ ನೀಡದೆ ಸಂಗೊಳ್ಳಿ ರಾಯಣ್ಣನ ಪುಸ್ಥಳ ತೆರವುಗೊಳ್ಳಿಸಿರುವುದು ಖಂಡನೀಯ: ಕಾಗಿನೆಲೆ ಕನಕಗುರು ಸ್ವಾಮಿಜೀ…!


ಶಿಕಾರಿಪುರ ಪಟ್ಟಣದ ಕಾನೂರು ಕಡೆ ಕೇರಿಕ್ರಾಸ್ ಬಳಿ ಈ ಹಿಂದೆ ತಾಲೂಕು ಆಡಳಿತ ವತಿಯಿಂದ ಸ್ಥಳಾಂತರಗೊಂಡ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇದ್ದ ಸ್ಥಳಕ್ಕೆ ಗುರುವಾರ ಕನಕ ಗುರುಪೀಠದ ಶ್ರೀ ನಿರಂಜನಪುರಿ ಸ್ವಾಮೀಜಿ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಿಕಾರಿಪುರ ನಗರದಲ್ಲಿ ಸಂಗೊಳ್ಳಿ ರಾಯಣ್ಣ ನ ಪುತ್ಥಳಿ ಆಗಸ್ಟ್ 15 ರಂದು ಅನಾವರಣ ಮಾಡಬೇಕೆಂದು ಸಮಾಜದ ಬಂಧುಗಳು ಸ್ಥಳ ನಿಗದಿಪಡಿಸಿ ಅದಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದರು.

ತಾಲೂಕ ಆಡಳಿತವು ಸಮುದಾಯವು ತಪ್ಪು ಮಾಡಿದೆ ಎಂದು ಏಕಾಏಕಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ತಾಲೂಕು ಆಡಳಿತದ ತಾಸಿಲ್ದಾರ್ ಪೋಲಿಸ್ ನವರು. ಸ್ಥಳಾಂತರ ಮಾಡಿರುವುದು ಖಂಡನೀಯ.

ಈ ದೇಶದಲ್ಲಿ ಅಪರಾಧ ಮಾಡಿದ ವ್ಯಕ್ತಿಗೂ ನಿನ್ನ ಕೊನೆಯ ಆಸೆ ಏನು ಎಂದು ಕೇಳುತ್ತಾರೆ ಕಾಲ ಅವಕಾಶ ನೀಡುತ್ತಾರೆ.

ಈ ಕ್ಷೇತ್ರದ ಸಂಸದರು ಮಠದ ಭಕ್ತರಾದ ಮಾಜಿ ಮುಖ್ಯಮಂತ್ರಿಗಳು ತಾಲೂಕ್ ಆಡಳಿತವು ಆದಷ್ಟು ಬೇಗ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮಠದ ವತಿಯಿಂದ ಸೂಕ್ತ ಹೋರಾಟ ಮಾಡುತ್ತೇವೆ ಎಂದು ಮಾಧ್ಯಮದವರ ಮೂಲಕ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್, ಶಿವಕುಮಾರ್, ಸಂದೀಪ್, ಚೇತನ್, ಶಿವು ಸೇರಿದಂತೆ ಅನೇಕರು ಇದ್ದರು..
News by: Raghu Shikari-7411515737