ಶಿಕಾರಿಪುರ :ಸಂಗೊಳ್ಳಿ ರಾಯಣ್ಣನ ಪ್ರತಿಮೆ ರಾತ್ರೋರಾತ್ರಿ ತೆರವುಗೊಳ್ಳಿಸಲು ಬಿಜೆಪಿ ಮುಖಂಡರು ಕಾರಣ: ಪುರಸಭಾ ಸದಸ್ಯ ನಾಗರಾಜ್ ಗೌಡ ಗಂಭೀರ ಆರೋಪ..!

ಶಿಕಾರಿಪುರ :ಸಂಗೊಳ್ಳಿ ರಾಯಣ್ಣನ ಪ್ರತಿಮೆ ರಾತ್ರೋರಾತ್ರಿ ತೆರವುಗೊಳ್ಳಿಸಲು ಬಿಜೆಪಿ ಮುಖಂಡರು ಕಾರಣ: ಪುರಸಭಾ ಸದಸ್ಯ ನಾಗರಾಜ್ ಗೌಡ ಗಂಭೀರ ಆರೋಪ..!

ಶಿಕಾರಿಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲಾ ಕಾಂಗ್ರೆಸ್ ಪ್ರ.ಕಾ.ಪುರಸಭಾ ಸದಸ್ಯ ನಾಗರಾಜ್ ಗೌಡ‌ ತಾಲ್ಲೂಕಿನ ಎಲ್ಲಾ ಧರ್ಮದ ಸಹಕಾರದಿಂದ ನಿರ್ಮಾಣಗೊಂಡಿದ್ದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಉದ್ಘಾಟನೆಗೂ ಮುನ್ನ. ತಾಲ್ಲೂಕು ಆಡಳಿತ ತೆರವುಗೋಳಿಸಿರುವುದು ಖಂಡನೀಯ ಎಂದರು.

ಪ್ರತಿಮೆ ಉದ್ಘಾಟನೆಗೊಂಡರೆ ಈ ಕೀರ್ತಿ ಎಲ್ಲಿ ತಮ್ಮ ಕೈ ತಪ್ಪಿ ಹೋಗುತ್ತದೆಯೋ ಎಂದು ಸಂಸದ ಬಿ ವೈ ರಾಘವೇಂದ್ರ ಮತ್ತು ಗುರುಮೂರ್ತಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ರಾಯಣ್ಣನ ಪ್ರತಿಮೆಯನ್ನು ತಾಲ್ಲೂಕು ಆಡಳಿತದ ಮುಖಾಂತರ ತೆರವುಗೊಳಿಸಿದ್ದಾರೆ.yno

ಅತೀ ಶೀಘ್ರದಲ್ಲೇ ಅದೇ ಸ್ಥಳದಲ್ಲಿ ಮರು ನಿರ್ಮಾಣ ಮಾಡಿ ಉದ್ಘಾಟಿಸದ್ದಿದ್ದರೆ ತಾಲ್ಲೂಕಿನಾದ್ಯಂತ ಉಗ್ರ ಹೋರಾಟದ ನಡೆಸಲಾಗುವುದು ಎಂದರು.

ಪುರಸಭಾ ಸದಸ್ಯ ಹುಲ್ಮಾರ್ ಮಹೇಶ್ ಮಾತನಾಡಿ ಕುರುಬ ಸಮಾಜದ ಅಧ್ಯಕ್ಷರಾದ ಕಬಡಿ ರಾಜಣ್ಣರವರು, ನೇಮಕವಾಗಿರುವುದು ಪಕ್ಷಾತೀತವಾಗಿ ಸಮಾಜದ ಅಭಿವೃದ್ಧಿ ಶ್ರಮಿಸಬೇಕುಪತ್ರಿಕಾಗೋಷ್ಠಿ ನಡೆಸಿ ಒಂದು ಪಕ್ಷಕ್ಕೆ ಸೀಮಿತವಾಗಿ ಹೇಳಿಕೆ ನೀಡಿದ್ದಾರೆ ಇದು ಖಂಡನೀಯವಾಗಿದೆ.

ಶಿರಾಳಕೊಪ್ಪ ವೃತ್ತದಲ್ಲಿ ಅಕ್ಕಮಹಾದೇವಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಯಾವ ಜನಾಂಗದವರೂ ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಏಕೆ ಅನುಮತಿ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕಳೆದ 25 ವರ್ಷಗಳಿಂದ ದಲಿತ ಸಮುದಾಯದವರು ಶಿವಮೊಗ್ಗ ವೃತ್ತದಲ್ಲಿ ಡಾ, ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಚಿಂತನೆ ನಡೆಸಿ ಪುರಸಭೆಗೆ ನಿರಂತರವಾಗಿ ಮನವಿ ಮಾಡಿದರೂ ಬಿಜೆಪಿ ಪಕ್ಷದ ಸದಸ್ಯರು ಹಾಗೂ ಪುರಸಭಾ ಮುಖ್ಯಾಧಿಕಾರಿಗಳು ಈ ವಿಷಯವನ್ನು ಪುರಸಭಾ ಸದಸ್ಯರ ಸಭೆಯಲ್ಲಿ ಚರ್ಚೆ ನಡೆಸುವುದಿರಲಿ ಅಜೆಂಡಾಗೇ ತಂದಿಲ್ಲ.

ಶಿಕಾರಿಪುರ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಅನಾವರಣ ಮಾಡಲು ಅವಕಾಶ ಕಲ್ಪಿಸಲಾಗದ ವಿಷಯ ರಾಜ್ಯಾದ್ಯಂತ ಚರ್ಚೆ ನಡೆಸಲಾಗುತ್ತಿದೆ.

ಈಗಾಗಲೇ ಇನ್ನೆರಡು ದಿನಗಳಲ್ಲಿ 15 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಆದ್ದರಿಂದ ಆದಷ್ಟು ಬೇಗ ಮೂಲ ಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ನಿರ್ಮಾಣ ಮಾಡದಿದ್ದರೆ ಸಮಾಜದ ಇನ್ನಿತರ ಸಮಾಜದ ಮುಖಂಡರು ಸೇರಿ ಪಟ್ಟಣದಲ್ಲಿ ಬಸವಣ್ಣನವರ, ಡಾ, ಬಿ ಆರ್ ಅಂಬೇಡ್ಕರ್ ರವರ ಮತ್ತು ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗಳನ್ನು ವಿವಿಧ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಉಪಾಧ್ಯಕ್ಷ ರಾಘವೇಂದ್ರ ನಾಯ್ಕ್,ವೇಣುಗೋಪಾಲ್, ವಕೀಲ ನಿಂಗಣ್ಣ, ಸುರೇಶ್, ಮುಕ್ತಿಯಾರ್ ಜೋಸೆಫ್, ನಾಗಣ್ಣ ಇದ್ದರು. 

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!