ಸೋಂಕಿನ ಅವಸ್ಥೆಯಲ್ಲಿ ಬರುವ ನಿಶ್ಶಕ್ತತೆ…!

ಸೋಂಕಿನ ಅವಸ್ಥೆಯಲ್ಲಿ ಬರುವ ನಿಶ್ಶಕ್ತತೆ…!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:

ಸೋಂಕಿನ ಅವಸ್ಥೆಯಲ್ಲಿ ಬರುವ ನಿಶ್ಶಕ್ತತೆ.

ಈ ನಿಶ್ಯಕ್ತತೆಯಲ್ಲಿ ಎರಡು ಹಂತಗಳಿವೆ.
★ಅಪಾಯರಹಿತ ನಿಶ್ಶಕ್ತತೆ.
★ಅಪಾಯಕಾರಿ ನಿಶ್ಶಕ್ತತೆ.

1️⃣ಅಪಾಯರಹಿತ ನಿಶ್ಶಕ್ತತೆ:-
ವೈರಾಣು ದೇಹ ಪ್ರವೇಶಿಸಿದುದರ ಲಕ್ಷಣವಾಗಿ ಆರಂಭದಲ್ಲಿ ಶರೀರದ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗುತ್ತವೆ.
ಈ ಸೆಳೆತವನ್ನು ರೋಗಿಯು ನಿಶ್ಯಕ್ತಿಯೆಂದೂ, ಮೈ-ಕೈ ನೋವು ಎಂದೂ, ಸಂಧಿನೋವು ಎಂತಲೂ, ಆಲಸ್ಯ ಎಂತಲೂ ವಿವಿಧ ರೀತಿಯಿಂದ ಗುರುತಿಸಿಕೊಳ್ಳುತ್ತಾನೆ. ಈ ನಿಶ್ಶಕ್ತತೆಗೆ ಕಾರಣ ವೈರಾಣುವಿಗೆ ನಮ್ಮ ರೋಗನಿರೋಧಕ ಶಕ್ತಿ ತೋರುವ ಪ್ರತಿಕ್ರಿಯೆಯೇ ಆಗಿದೆ.
ಇಲ್ಲಿ ರೋಗನಿರೋಧಕ ಶಕ್ತಿಯ ವ್ಯಕ್ತತೆಯು ರಕ್ತಕಣಗಳಲ್ಲಿ ಆಗುವ ಸಾಂಖಿಕ ಮತ್ತು ಕ್ರಿಯಾತ್ಮಕ ವ್ಯತ್ಯಾಸವೇ ಆಗಿದೆ.

ವೈರಾಣುವಿನೊಂದಿಗಿನ ಈ ಹೋರಾಟದಲ್ಲಿ ನಿರಂತರ ಸಾಯುತ್ತಿರುವ ರಕ್ತಕಣಗಳನ್ನು ಪೂರೈಸಲು ಮಜ್ಜೆಯು ಹೆಚ್ಚು ಹೆಚ್ಚು ಉತ್ಪತ್ತಿ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಅದು ಮೇದಸ್ಸು ಮತ್ತು ಮಾಂಸಖಂಡಗಳಿಂದ ಶಕ್ತಿಯನ್ನು ಹೀರಿಕೊಳ್ಳುತ್ತಿರುತ್ತದೆ.
ಈ ಕಾರಣಕ್ಕೆ ಬರುವ ಮಾಂಸ-ಮೇದಸ್ಸಿನ ದುರ್ಬಲತೆಯೇ ನಿಶ್ಶಕ್ತಿಗೆ ಕಾರಣ.

🍃🍃ಪರಿಹಾರಗಳು🍃🍃
▪️ವಿಶ್ರಾಂತಿ.
▪️ಲಘುಆಹಾರ ಭೋಜನ.
▪️ಆಹಾರಕ್ಕೆ ತುಪ್ಪಸೇರಿಸಿ ಒಗ್ಗರಣೆ ಕೊಡುವುದು.
▪️8 ರಿಂದ 10 ತಾಸುಗಳ ರಾತ್ರಿ ಕಾಲದ ನಿದ್ರೆ.
▪️ಜ್ವರ ಬಾರದಂತೆ, ಹೆಚ್ಚಾಗದಂತೆ ಅಮೃತಬಳ್ಳಿ(ಕಾಂಡ) ಸೇವನೆ.
▪️ಶರೀರದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ (ಆಹಾರವನ್ನು ಯಥೇಚ್ಛವಾಗಿ ನೀರು ಬಳಸಿ ತಯಾರಿಸಿ, ಕುದಿಸಿ ಆರಿಸಿದ ನೀರನ್ನು ಸೇವಿಸಿ, ಒತ್ತಾಯಪೂರ್ವಕ ಜಲಪಾನ ಬೇಡ).
▪️ಅಗತ್ಯಕ್ಕನುಸಾರ ಸ್ವಲ್ಪಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಿ.
▪️ವೈದ್ಯರ ನಿರ್ದೇಶನದಂತೆ ಆಯುರ್ವೇದ ಮತ್ತು ಅಲೋಪಥಿ ಔಷಧಗಳನ್ನು ತಪ್ಪದೇ ಬಳಸಿ.

2️⃣ಅಪಾಯಕಾರಿ ನಿಶ್ಶಕ್ತತೆ:-
★ಮೇಲಿನ ನಿಶ್ಶಕ್ತತೆಗಿಂತ ಅತೀತೀವ್ರವಾಗಿ
★ನಿಶ್ಯಕ್ತಿ ಉಂಟಾಗುತ್ತದೆ.
★ಹತ್ತು ಹೆಜ್ಜೆ ನಡೆದರೂ ಆಯಾಸ ಬರುವುದು.
★ಸಮಾಧಾನ ಇಲ್ಲದಿರುವುದು.
★ಸಾಕಷ್ಟು ಉಸಿರಾಟ ಆಗುತ್ತಿಲ್ಲ ಎನಿಸುವುದು.
★ತಿಂದ ಅನ್ನ ಜೀರ್ಣವಾಗದಿರುವುದು.
★ಮಲಗಿದರೆ ಅತ್ಯಲ್ಪ ಹಿತ ಎನಿಸುವುದು.
★ಬಲವಾದ ಒಣಕೆಮ್ಮು ಬರುವುದು.
★ಎದೆ ಮತ್ತು ಪಕ್ಕೆಗಳಲ್ಲಿ ನೋವು ಮತ್ತು ಹಿಡಿದಂತೆ ಅನುಭವವಾಗುವುದು.
⤴️
ಇವೆಲ್ಲವುಗಳಿಗೆ ಕಾರಣ ರಕ್ತದಲ್ಲಿನ ಅಮ್ಲಜನಕ ಕೊರತೆ.
ಅಂದರೆ, ಪುಪ್ಪುಸಗಳು ಶರೀರಕ್ಕೆ ಅಗತ್ಯವಾದಷ್ಟು ಪ್ರಮಾಣದಲ್ಲಿ ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದರ್ಥ. ಇದು ನಿಜಕ್ಕೂ ಅಪಾಯಕಾರಿ ಹಂತ. ಏಕೆಂದರೆ, ಆಮ್ಲಜನಕದ ಕೊರತೆಯು ಸೋಂಕು ಸರ್ವ ಶರೀರಕ್ಕೂ ಪಸರಿಸಲು, ಅನಿಯಂತ್ರಿತವಾಗಿ ವೃದ್ಧಿಯಾಗಲು ಕಾರಣವಾಗುತ್ತದೆ.
ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಶರೀರದಲ್ಲೂ ವೃದ್ಧಿಯಾಗುವ ವೈರಾಣುಗಳನ್ನು ಪ್ರತಿರೋಧಿಸಲು ನಮ್ಮ ಇಮ್ಯುನಿಟಿಯು ಸ್ವಯಂ ಚಾಲಿತ/ಅನಿಯಂತ್ರಿತ ಹಂತಕ್ಕೆ ತಲುಪುತ್ತದೆ, ಇಲ್ಲಿ ನಡೆಯುವ ಭಯಂಕರ ಯುದ್ಧಕ್ಕೆ ಮನುಷ್ಯ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.

🍃🍃ಪರಿಹಾರಗಳು🍃🍃
★ಯಾವ ಕಾರಣಕ್ಕೂ ಆತಂಕಕ್ಕೆ ಒಳಗಾಗಬೇಡಿ.
★ಸಂಪೂರ್ಣ ವಿಶ್ರಾಂತಿ ಅತ್ಯಗತ್ಯ-ಅಂದರೆ, ಶೌಚಾಲಯಕ್ಕೂ ಸಹ ನಿಧಾನವಾಗಿ ಹೆಜ್ಜೆ ಹಾಕಿ ನಡೆಯಿರಿ.
★ಆಗಾಗ oximeter ನಿಂದ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ನೋಡಿಕೊಳ್ಳಿ. ★ಇದು 95% ಗಿಂತ ಕೆಳಗಿಳಿದರೆ ಔಷಧ ಬದಲಾವಣೆಯೋ, ಆಹಾರ ವಿಹಾರದ ಬದಲಾವಣೆ ಬೇಕಾಗುವುದು, ಸೂಕ್ತ ವೈದ್ಯರನ್ನು ಸಂಪರ್ಕಿಸಿ.
★ಪಚನಕ್ಕೆ ಅತ್ಯಂತ ಹಗುರವಾದ, ದ್ರವಾಂಶಯುಕ್ತ ಆಹಾರಗಳನ್ನು ಮಾತ್ರ ಸೇವಿಸುತ್ತಿರಿ.
★ನಿಯಮಿತವಾಗಿ ಆಯುರ್ವೇದ, ಅಲೋಪಥಿ ಔಷಧಿಗಳನ್ನು ಸೇವಿಸುತ್ತಿರಿ.
★ಅನಗತ್ಯವಾಗಿ paracetamol, pain killers tablests ಗಳ ಸೇವನೆ ಬೇಡ.
★ಯಾವ ಲಕ್ಷಣವನ್ನೂ ನಿರ್ಲಕ್ಷಿಸಬೇಡಿ.

★CoVid negative ಬಂದರೂ ಈ ಲಕ್ಷಣಗಳನ್ನು ನಿರ್ಲಕ್ಷಿಸುವಂತಿಲ್ಲ.
★ಎರಡು ಮೂರು ದಿನಕ್ಕೊಮ್ಮೆ ಅಗತ್ಯ ರಕ್ತತಪಾಸಣೆಯನ್ನು ಮಾಡಿಸಿ, ರೋಗದ ತೀವ್ರತೆಯನ್ನು ಗಮನಿಸುತ್ತಿರಬೇಕು.
★ಎಲ್ಲಾ ಲಕ್ಷಣಗಳಿಂದ ಹೊರಬಂದ ನಂತರವೂ ಕನಿಷ್ಠ 7 ರಿಂದ 14 ದಿನಗಳವರೆಗೆ ಆಹಾರ- ವಿಹಾರ-ನಿದ್ರೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಡಿ.

ರೋಗನಿರೋಧಕಶಕ್ತಿವರ್ಧಕ 38 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
8792290274

ವಿಶ್ವಹೃದಯಾಶೀರ್ವಾದವಂ ಬಯಸಿ

ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!