ರೋಗ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ- ಅಧಾರಣೀಯ ವೇಗಗಳು ಭಾಗ-4

ರೋಗ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ- ಅಧಾರಣೀಯ ವೇಗಗಳು ಭಾಗ-4

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ರೋಗ ಅನುತ್ಪಾದನೀಯ ಅಧ್ಯಾಯದಲ್ಲಿ ಬರುವ-
ಅಧಾರಣೀಯ ವೇಗಗಳು
ಭಾಗ-4

ಅಧೋವಾಯು(ಗುದದಿಂದ ಹೊರಬರುವ ಕಲ್ಮಶ ಗಾಳಿ)ವನ್ನು ತಡೆಯುವ ಅಭ್ಯಾಸ ಉಳ್ಳವರಿಗೆ, ಹೃದ್ರೋಗದಂತಹ ದೊಡ್ಡ ಕಾಯಿಲೆಗಳು ಬರುತ್ತವೆ…!!

📜 ಅಧೋವಾತಸ್ಯ ರೋಧೇನ……………ಹೃದ್ಗದಾಃ ||
-ಅಷ್ಟಾಂಗ ಹೃದಯ, ರೋಗ ಅನುತ್ಪಾದನೀಯ ಅಧ್ಯಾಯ-4/2

*ಅಧೋವಾಯುವನ್ನು ತಡೆಯುವುದರಿಂದ ಬರಬಹುದಾದ ರೋಗಗಳಲ್ಲಿ *ಹೃದ್ರೋಗ* ವನ್ನು ಇಂದು ನೋಡೋಣ.


ಅಧೋವಾಯು ತಡೆದರೆ ಹೃದ್ರೋಗವೇ⁉️

★ ಆಯುರ್ ವೈಜ್ಞಾನಿಕ ವಿವರಣೆ ನೋಡೋಣ:

ತತ್ ಕ್ಷಣದ ಹೃದಯ ವೈಫಲ್ಯದಿಂದ ಸಾವು ಬರುತ್ತಿರುವ ಮೂಲ ಕಾರವೇ ಈ ಅಧೋವಾಯು!!

ದುರಾದೃಷ್ಟ ಎಂದರೆ, ಇದರ ಪರಿಚಯವೇ ಇಲ್ಲದ ಒಂದು ವಿಜ್ಞಾನವನ್ನಷ್ಟೇ ನಂಬಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ!
ಪ್ರಾಣದ ಜೊತೆ ಸರಸವಾಡುವಷ್ಟರ ಮಟ್ಟಿಗೆ ಒಂದು ವಿಜ್ಞಾನವನ್ನು ನಂಬುವುದು ಮತ್ತು ಒಂದನ್ನು ಅಲಕ್ಷ್ಯ ಮಾಡಲು ಹೋಗಬಾರದು.
ಸಧ್ಯದ ವಿಜ್ಞಾನ ಏನೇ ಹೇಳಲಿ, ಅದರ ಜೊತೆ ಆಯುರ್ವಿಜ್ಞಾನ‌ ಹೇಳುವ ಬೇಧಿಯನ್ನು ಸರಿ ಇಟ್ಟುಕೊಳ್ಳುವ ಕಡೆಗೆ ಅಲಕ್ಷ್ಯ ಮಾಡದೇ ಸ್ವಲ್ಪ ಗಮನ ಹರಿಸಿದರೂ ಅದೆಷ್ಟೋ ಅಮೂಲ್ಯ ಪ್ರಾಣಗಳನ್ನು ಕಾಪಾಡಬಹುದು.
ಇದಕ್ಕಾಗಿ ನಿತ್ಯ ಔಷಧ, ಅದರ ದುಷ್ಪರಿಣಾಮ ಏಕೆಬೇಕು?

◆ ಯಾಕೆ ಅಧೋವಾಯುವಿನಿಂದ ಇಷ್ಟು ದೊಡ್ಡ ತೊಂದರೆ ಬರುತ್ತದೆ?!

ಪ್ರಾಣವನ್ನು ತಗೆಯುವ ಮರ್ಮಸ್ಥಾನಗಳಲ್ಲಿ ಗುದ ಮರ್ಮವೂ ಒಂದು, ಇಲ್ಲಿ ಉಂಟಾಗುವ ವಾಯುವಿನ ಒತ್ತಡ ಇದ್ದವರು ಗಮನಿಸಿ:-

• ನಿಮಗೆ ಗಾಭರಿ ಇರುತ್ತದೆ.
• ಜೋರಾದ ಗಲಾಟೆಗೆ ಎದೆ ನಡುಗುತ್ತದೆ, ಕೈಕಾಲು ಅದುರುತ್ತವೆ.
• ಆಗಾಗ ಎದೆ ಚುಚ್ಚುತ್ತದೆ. ಪಕ್ಕೆಗಳು ಹಿಡಿದಂತೆ ಭಾಸವಾಗುತ್ತದೆ.
• ಬೇಧಿ ಕಟ್ಟಿಕೊಂಡಾಗ ಮೈ ಬೆವರುತ್ತದೆ, ಉಸಿರು ಕ್ಷೀಣಿಸುತ್ತದೆ.
• ನಿದ್ದೆ ಬರುವುದಿಲ್ಲ ಅಥವಾ ಮತ್ತಿನಂತೆ ಮಲಗುತ್ತೀರಿ‌ ಮತ್ತು ಎದ್ದಾಗ ನಿದ್ದೆಯಾದ ಉತ್ಸಾಹ ಇರುವುದಿಲ್ಲ.
• ಹಸಿವಾದರೆ ತಡೆಯಲಾಗದ ಸಂಕಟ ಇರುತ್ತದೆ.
• ಅಧೈರ್ಯ, ಅವಿಶ್ವಾಸ- ಡೋಲಾಯ ಮನಸ್ಥಿತಿ ಇರುತ್ತದೆ.

ಹೆಚ್ಚಿನ ಮನೋರೋಗದ ಆರಂಭವೇ ಅಪಾನ ಸ್ಥಾನದ ದುಷ್ಟಿಯಿಂದ ಆಗುತ್ತದೆ.

ಏಕೆಂದರೆ, ದೊಡ್ಡ ಕರುಳಿನ, ಗುದ ಸ್ಥಾನದ ವಾಯುವೇ ಮೆದುಳು ಮತ್ತು ಹೃದಯದೊಂದಿಗೆ ನೇರ ಸಂಪರ್ಕ‌ಹೊಂದಿರುತ್ತದೆ.

ನಿತ್ಯ ಅಧೋವಾಯು ಹೆಚ್ಚು ಹೆಚ್ಚು ಉತ್ಪತ್ತಿ ಆಗುವವರಲ್ಲಿಯೂ ಮತ್ತು ಅದನ್ನು ತಡೆಯುವ ಅಭ್ಯಾಸ ಉಳ್ಳವರಲ್ಲಿಯೂ ಹೃದ್ರೋಗದ ಸಾಧ್ಯತೆ ಅತೀ ಹೆಚ್ಚು.

🔰 ಪ್ರಮುಖ ಮಾಹಿತಿ:
ಇಲ್ಲಿ ಹೃದ್ರೋಗ ಎಂದರೆ, ರಕ್ತನಾಳಗಳ ಕಟ್ಟುವಿಕೆಯಲ್ಲ, ಆಯುರ್ವೇದ ಅದನ್ನು ವಾತರಕ್ತ ಎಂದು ಕರೆಯುತ್ತದೆ, ಮುಂದಿನ ಸಂಚಿಕೆಗಳಲ್ಲಿ ಆ ಬಗ್ಗೆ ವಿವರವಾಗಿ ನೋಡೋಣ.
ನಿಜವಾಗಿ ಅಲೋಪತಿಯವರೂ ಇದನ್ನು ಹೃದ್ರೋಗದ ಬದಲು ವ್ಯಾಸ್ಕುಲಾರ್ ಕಾಯಿಲೆ ಎನ್ನಬೇಕು.
ಇರಲಿ,
ಇಲ್ಲಿ ಉಲ್ಲೇಖಿಸಿರುವ ಹೃದ್ರೋಗವು ಹೃದಯದ ಸ್ನಾಯುಗಳ ವೈಫಲ್ಯತೆಯನ್ನು ಹೇಳುತ್ತದೆ.

ಪ್ರತಿಕ್ಷಣ ಸತತವಾಗಿ ಹೃದಯ ಬಡಿತ ಇರುವುದೇ ಈ ಸ್ನಾಯುಗಳು ಕುಗ್ಗುವ ಮತ್ತು ಹಿಗ್ಗುವ ಕ್ರಿಯೆಯಿಂದ, ಅಧೋವಾಯುವು ನೇರವಾಗಿ ಸ್ನಾಯುಗಳಲ್ಲಿನ ‌ಪ್ರೋಟೀನನ್ನು ಬಹಳವಾಗಿ ಹಾನಿಗೊಳಿಸುತ್ತದೆ.‌ ತಿಕ್ತ ಕಷಾಯರಸ ಪ್ರಧಾನವಾಗಿರುವ ವಾತವು ಅತಿಯಾಗಿ ಒಣಗಿಸುವ ಕಾರಣ ಸ್ನಾಯುಗಳು ಒಣಗುತ್ತವೆ, ಅವು ಒಣಗಿದ ಲಕ್ಷಣಗಳನ್ನೇ ತೋರದಂತೆ ಹೃದಯ ಇದ್ದಕ್ಕಿಂದಂತೆ ಹೃದಯಸ್ತಂಭನ ಆಗುವ ಕಾರಣ ಇದೇ ಆಗಿದೆ.

LVEF-55-60% ಗಿಂತ ಕಡಿಮೆ ಇರುವ ಅನೇಕರು ಈ ಬಗ್ಗೆ ಎಚ್ಚರ ಇರಬೆರಕು.

◆ ಕಾರಣ ಏನು?
ಕಷಾಯ ರಸ ಪ್ರಧಾನವಾದ ಬೇಳೆಕಾಳು(ಶಿಂಬಿ ಧಾನ್ಯ) ಮೊಳಕೆ ಕಾಳುಗಳಲ್ಲಿ ಪ್ರೋಟೀನ್ ಅಧಿಕ ಪ್ರಮಾಣದಲ್ಲಿರುತ್ತದೆ. ಆದರೆ ಅದು ಒಳ್ಳೆಯದೆಂದು ಮೊಳಕೆಕಾಳು ತಿನ್ನುವ, ಪ್ರೋಟೀನ್ ಪೌಡರ್ ಯಥೇಚ್ಛವಾಗಿ ಬಳಸುತ್ತೇವೆ, ಇಂತಹ ಬೇಳೆಕಾಳುಗಳು ದೊಡ್ಡ ಕರುಳಿನಲ್ಲಿ ಗ್ಯಾಸ್ ಉಂಟು ಮಾಡುತ್ತವೆ. ಇದು ಎಲ್ಲರ ಅನುಭವಕ್ಕೂ ಬರುವ ವಿಷಯ. ಮತ್ತೆ ಉಂಟಾದ ಆ ಗ್ಯಾಸನ್ನು ಮುಜುಗರದಿಂದ ತಡೆಯುತ್ತೇವೆ, ಇದು ಮುಂದುವರಿದರೆ ಮಾಂಸಖಂಡ ಮತ್ತು ಸ್ನಾಯುಗಳ ಹಾನಿ ತಪ್ಪಿಸಲು ಅಸಾಧ್ಯ.

◆ ಹೇಗೆ ತಪ್ಪಿಸಿಕೊಳ್ಳಬಹುದು?
ಇಂತಹ ಹೃದ್ರೋಗದಿಂದ ಅಪಾಯರಹಿತವಾಗಿ ಇರುವುದಕ್ಕಾಗಿ ಆಹಾರದಲ್ಲಿ ನಿತ್ಯವೂ ತುಪ್ಪವನ್ನು ಬಳಸಿ, ಶಾರೀರಿಕ ಶ್ರಮ ಮಾಡಿ, ನಂತರ ಬೇಕಾದರೆ ಪ್ರೋಟೀನ್ ಬಳಸಿ (• ಬೇಳೆ ಬೇಯಿಸಲು ಎಣ್ಣೆ ಹಾಕುತ್ತೇವೆ. • ಅಡಿಕೆ ಮಾರುವ ಮೊದಲು ಬೆಲ್ಲದಲ್ಲಿ‌ ಬೇಯಿಸುತ್ತಾರೆ. • ಅಡಿಕೆ ತಿನ್ನುವ ಮೊದಲು ತುಪ್ಪದಲ್ಲಿ ಸಂಸ್ಕರಿಸುತ್ತಾರೆ. ಇವೆಲ್ಲಾ ಏಕೆಂದರೆ ಬೇಳೆ ಮತ್ತು ಅಡಿಕೆಗಳು ಅಷ್ಟೊಂದು ಒಗರು ರಸ ಇರುವ ಪದಾರ್ಥಗಳು, ಅವು ಶಕ್ತಿಯನ್ನು ಸಮರ್ಪಕವಾಗಿ ಬಿಡುಗಡೆ ಮಾಡಲು ಜಿಡ್ಡು ಮತ್ತು ಸಿಹಿ ಅಂಶ ಬೇಕೇ ಬೇಕು.)
ಇಂದು ಕೊಲೆಸ್ಟರಾಲ್‌ ಗೆ ಹೆದರಿ ಜಿಡ್ಡನ್ನೂ, ಮಧುಮೇಹಕ್ಕೆ ಹೆದರಿ ಸಿಹಿಯನ್ನೂ ಬಿಟ್ಟಿದ್ದೇವೆ.‌ಆದರೆ ಯಾವುದೇ ಭಯವಿಲ್ಲದೇ ಬೇಳೆಕಾಳುಗಳನ್ನು ಯಥೇಚ್ಛವಾಗಿ ಸೇವಿಸುತ್ತಿದ್ದೇವೆ.!!

*ಪ್ರೋಟೀನ್ ಜೊತೆಗೆ ತುಪ್ಪ, ಸಿಹಿ ತಿಂದರೆ ಗ್ಯಾಸ್ ಉತ್ಪತ್ತಿ ನಿಯಂತ್ರಿಸಲ್ಪಡುತ್ತದೆ. ಹಾಗಾಗಿ ಹಾಲು ಪ್ರೋಟೀನ್ ಆಗಿದ್ದರೂ ಸಹ ಪಚನಕ್ಕೆ ಅದರಲ್ಲಿನ ಜಿಡ್ಡು ಸಹಕರಿಸುತ್ತದೆ. ಮೊಟ್ಟೆ ಪ್ರೋಟೀನ್ ಆಗಿದ್ದರೂ ಅದರ ಯೋಕ್(ಹಳದಿ) ಗ್ಯಾಸನ್ನು ನಿಯಂತ್ರಿಸುತ್ತದೆ.

▶️ ಕಿವಿಮಾತು:
ದಯಮಾಡಿ ಅಧೋವಾಯು ಉತ್ಪತ್ತಿಯನ್ನು ತಡೆಯಿರಿ ಅದರ ಬದಲು ಹೊರಹಾಕುವುದನ್ನು ತಡೆಯಲು ಯತ್ನಿಸಬೇಡಿ.

ನಿಮ್ಮ ಸಂಪರ್ಕಕ್ಕೆ:
📞 8792290274
       9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)

Admin

Leave a Reply

Your email address will not be published. Required fields are marked *

error: Content is protected !!