ಹರೆಯದಲ್ಲಿ ಕಾಣುವ ಕಿಡ್ನಿ ವೈಫಲ್ಯಕ್ಕೆ ಅತೀ/ಶಕ್ತಿಯುತ ಆಹಾರ ಸೇವನೆಯೇ ಪ್ರಧಾನ ಕಾರಣ!!!

ಹರೆಯದಲ್ಲಿ ಕಾಣುವ ಕಿಡ್ನಿ ವೈಫಲ್ಯಕ್ಕೆ ಅತೀ/ಶಕ್ತಿಯುತ ಆಹಾರ ಸೇವನೆಯೇ ಪ್ರಧಾನ ಕಾರಣ!!!

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ: ಹರೆಯದಲ್ಲಿ ಕಾಣುವ ಕಿಡ್ನಿ ವೈಫಲ್ಯಕ್ಕೆ ಅತೀ/ಶಕ್ತಿಯುತ ಆಹಾರ ಸೇವನೆಯೇ ಪ್ರಧಾನ ಕಾರಣ!!!

ಇಂದು ಹರೆಯದಲ್ಲೇ ಕಿಡ್ನಿ ವೈಫಲ್ಯಕ್ಕೆ ಒಳಗಾದ ಅನೇಕ ಮಕ್ಕಳನ್ನು ನೋಡುತ್ತಿದ್ದೇವೆ!!
ಸಾಮಾನ್ಯವಾಗಿ ಕಿಡ್ನಿ ವೈಫಲ್ಯಕ್ಕೆ ಮಧುಮೇಹ, ರಕ್ತದೊತ್ತಡವನ್ನು ಕಾರಣ ಎನ್ನುತ್ತಾರೆ.
ಆದರೆ, ಈ ಎರಡೂ ತೊಂದರೆಗಳಿರದ ಚಿಕ್ಕ ಮತ್ತು ಮಧ್ಯಮ ವಯಸ್ಸಿನಲ್ಲೇ ಕಿಡ್ನಿ ವೈಫಲ್ಯವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರನ್ನೂ ಮತ್ತು ಕಸಿ ಮಾಡಿಸಿಕೊಳ್ಳಲು ಸೂಕ್ತ ಮೂತ್ರಪಿಂಡಗಳನ್ನು ಹುಡುಕುತ್ತಿರುವವರನ್ನೂ ಸಾಮಾನ್ಯವಾಗಿ ಕಾಣುತ್ತಿದ್ದೇವೆ.

ಹಾಗೆಯೇ, ನಮ್ಮ ಕೇಂದ್ರದಲ್ಲಿ ನಾವು ಕಂಡಂತೆ ಇಂಥವರ ರೋಗದ ಇತಿಹಾಸವನ್ನು ನೋಡಿದರೆ ಅವರು ಈ ಕೆಳಗಿನ ಕಾರಣಗಳನ್ನು ಹೊಂದಿರುತ್ತಾರೆ👇

💢 ಶಾರೀರಿಕ ವ್ಯಾಯಾಮಕ್ಕಿಂತ ಹೆಚ್ಚಿನ ಆಹಾರ ಸೇವಿಸುತ್ತಾರೆ.

💢ಶಕ್ತಿಯುತ ಆಹಾರವನ್ನು ನಿತ್ಯವೂ ಅಥವಾ ಪದೇ ಪದೇ ಸೇವಿಸುತ್ತಾರೆ.

💢ಮನೆಯವರ ಒತ್ತಾಯಕ್ಕೆ ಹೆಚ್ಚಿನ ಆಹಾರವನ್ನು ಸೇವಿಸುತ್ತಾರೆ.

💢ಪದೇ ಪದೇ ಮಾಂಸಹಾರವನ್ನು ಸೇವಿಸುತ್ತಾರೆ.

💢ಪ್ರೀತಿಯ ಒತ್ತಾಯಕ್ಕೆ ಮಣಿದು ಅಥವಾ ತಟ್ಟೆಯಲ್ಲಿರುವುದನ್ನು ಖಾಲಿ ಮಾಡಲೇಬೇಕೆಂಬ ನಿಯಮಕ್ಕೆ ಬದ್ಧರಾಗಿ ಹೆಚ್ಚು ತಿನ್ನುತ್ತಿರುತ್ತಾರೆ.

💢ವಿವಿಧ ರೀತಿಯ ಪ್ರೈಡ್ ರೈಸ್ ಗಳನ್ನು ನಿತ್ಯವೂ ಅಥವಾ ಪದೇ ಪದೇ ಸೇವಿಸುತ್ತಾರೆ.

💢ನಿತ್ಯವೂ ಹೊಟೇಲ್, ಹಾಸ್ಟೆಲ್, ಪಿಜಿ ಗಳಲ್ಲಿ ಗಡುಸಾದ ಅಥವಾ ಅರೆಬೆಂದ ಆಹಾರಗಳನ್ನು ಸೇವಿಸುತ್ತಾರೆ.

💢ಮೈದಾ, ಎಣ್ಣೆಗಳಿಂದ ತಯಾರಿಸಿದ(ಬೇಕರಿ, ಪಿಜ್ಜಾ….) ಪದಾರ್ಥಗಳನ್ನು ಪದೇ ಪದೇ ಸೇವಿಸುತ್ತಾರೆ.

↕️
ನಮ್ಮ ದುರದೃಷ್ಟಕ್ಕೆ ಈ ಮೇಲಿನವುಗಳಲ್ಲಿ ಯಾವೊಂದು ಕಾರಣವನ್ನೂ ದುರಾಭ್ಯಾಸ ಅಥವಾ ದುಷ್ಟಚಟಗಳೆಂದು ನಾವುಗಳು ಗುರುತಿಸಿಲ್ಲ. ಇದೇ ಕಿಡ್ನಿ ವೈಫಲ್ಯದಂತಹ ಅನರ್ಥಕಾರಿ ರೋಗಗಳಿಗೆ ಕಾರಣ.
ಹರೆಯದಲ್ಲೇ ಆಗುವ ಈ ಅಪಾಯಕ್ಕೆ ಪೋಷಕರು ಕಣ್ಣೀರಿಡುವುದನ್ನು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಇನ್ನಾದರೂ ಈ ವಿಷಯದಲ್ಲಿ ಪೋಷಕರು ಎತ್ತೆಚ್ಚುಕೊಳ್ಳಬೇಕಾಗಿದೆ.

ಇವುಗಳಿಂದ ಕಿಡ್ನಿವೈಫಲ್ಯ ಹೇಗೆ ಉಂಟಾಗುತ್ತದೆ ನೋಡೋಣ:
“ಈ ಮೇಲಿನ ಕಾರಣಗಳಿಂದ, ಶರೀರದಲ್ಲಿ ಕರಗದಿರುವ protein, fat ಮತ್ತು ಲವಣಾಂಶಗಳು ಹೆಚ್ಚುವುದರಿಂದ ಕಿಡ್ನಿ ವೈಫಲ್ಯ ಉಂಟಾಗುತ್ತದೆ.”
ಮೇಲಿನ ಎಲ್ಲಾ ರೀತಿಯ ಆಹಾರಗಳು ಮತ್ತು ಅದನ್ನು ತಯಾರಿಸುವ ವಿಧಾನಗಳಿಂದ ಸುಲಭವಾಗಿ ಕರಗದ ಪ್ರೊಟೀನ್, ಕೊಬ್ಬಿನ ಕಣಗಳು ಶರೀರದಲ್ಲಿ ಉಳಿಯುತ್ತವೆ. ಇವು ಹೊರಹೋಗಲು ನಿತ್ಯವೂ ಎರಡು ಬಾರಿ ಪ್ರಾಕೃತವಾಗಿ ಮಲವಿಸರ್ಜನೆಯಾಗಬೇಕು.

ಆದರೆ, ಇಂದಿನ ಜೀವನಶೈಲಿ ಬಹುಮಟ್ಟಿಗೆ ಮಲಬದ್ಧತೆಯನ್ನುಂಟುಮಾಡುತ್ತಿದೆ.
ಹಾಗಾಗಿ, ದೊಡ್ಡ ಗಾತ್ರದ ಈ ಕಣಗಳನ್ನು ನಮ್ಮ ಮೂತ್ರಪಿಂಡಗಳು ನಿರಂತರ ಸೋಸಿ ಹೊರಹಾಕುತ್ತವೆ.
ಆಗ ಕಿಡ್ನಿಯಲ್ಲಿನ ಕಾರ್ಯನಿರ್ವಾಹಕ ಪೊರೆಯಾದ glomerula ಗಳಲ್ಲಿ ಇರುವ ರಂಧ್ರಗಳಿಗಿಂತ ದೊಡ್ಡಗಾತ್ರದ ಕಣಗಳನ್ನು ನಿರಂತರ ಹೊರಹಾಕಲು ಪ್ರಯತ್ನಿಸಿ ಆ ರಂಧ್ರಗಳು ಶಾಶ್ವತವಾಗಿ ದೊಡ್ಡವಾಗುತ್ತವೆ ಅಥವಾ ಹರಿದುಹೋಗುತ್ತವೆ.
“ಇದನ್ನೇ, ಕಿಡ್ನಿ ಅಥವಾ ಮೂತ್ರಪಿಂಡದ ವೈಫಲ್ಯ ಎನ್ನುತ್ತೇವೆ.”

⚠️ವಿಶೇಷ ಸೂಚನೆ:
ಆಯುರ್ವೇದದಲ್ಲಾಗಲೀ ಅಲೋಪಥಿಯಲ್ಲಾಗಲೀ ಮೂತ್ರಪಿಂಡಗಳನ್ನು ಮೊದಲಿನಂತೆ ಹಿಂದಿರುಗಿಸುವ ಯಾವುದೇ ಚಿಕಿತ್ಸೆ ಇರುವುದಿಲ್ಲ. (ಆರಂಭಿಕ ಹಂತದಲ್ಲೇ ಆಯುರ್ವೇದ ಪಥ್ಯ ಪಾಲನೆ ಮತ್ತು ಚಿಕಿತ್ಸೆಗಳಿಂದ ಗುಣಪಡಿಸಬಹುದು)

ಹಾಗಾಗಿ ಆತ್ಮೀಯರೇ,
“ಆಸ್ಪತ್ರೆ, ಔಷಧರಹಿತವಾಗಿ ಆಹಾರಪಾಲನೆಯಿಂದ ಮೂತ್ರಪಿಂಡಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೊಂದೇ ನಿಜವಾದ ಚಿಕಿತ್ಸೆ.”

ಹಣವಂತರೆಂದೋ, ಮಕ್ಕಳಮೇಲಿನ ಪ್ರೀತಿಗೆ ಸಾಲಮಾಡಿಯೋ ಒಂದೊಮ್ಮೆ ಮೂತ್ರಪಿಂಡ ಕಸಿ ಮಾಡಿಸಿಕೊಂಡರೂ ಸಹ, ಆ ಮೂತ್ರಪಿಂಡದ ಆಯಸ್ಸು 3 ರಿಂದ 5 ವರ್ಷ ಮಾತ್ರ!! ಮತ್ತು ಆ ಸಮಯದಲ್ಲಿ ಸೇವಿಸುವ ಮಾತ್ರೆಗಳ ಖರ್ಚು ಮತ್ತು ಸುಖವಿಲ್ಲದ ಜೀವನ ಯಾವ ಶತ್ರುವಿಗೂ ಬೇಡ. ಮತ್ತೊಮ್ಮೆ ಕಿಡ್ನಿ ಹಾಕಿಸಿದರೆ ಅದರ ಆಯಸ್ಸು ಮೊದಲಿನದಕ್ಕಿಂತ ಕಡಿಮೆ…..!!!

🔜ಮೂತ್ರಪಿಂಡ ವೈಫಲ್ಯದ ಆರಂಭಿಕ ಲಕ್ಷಣಗಳನ್ನು ನಾಳಿನ ಸಂಚಿಕೆಯಲ್ಲಿ ನೋಡೋಣ.

ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
📞 9148702645

ವಿಶ್ವಹೃದಯಾಶೀರ್ವಾದವಂ ಬಯಸಿ

-ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P).

Admin

Leave a Reply

Your email address will not be published. Required fields are marked *

error: Content is protected !!