ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಯಡಿಯೂರಪ್ಪನೇ ನನ್ನನ್ನು ಪಕ್ಷಕ್ಕೆ ವಾಪಸ್ಸು ಕರೆದೊಯ್ಯುತ್ತಾರೆ: ಕೆ.ಎಸ್.ಈಶ್ವರಪ್ಪ

ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಯಡಿಯೂರಪ್ಪನೇ ನನ್ನನ್ನು ಪಕ್ಷಕ್ಕೆ ವಾಪಸ್ಸು ಕರೆದೊಯ್ಯುತ್ತಾರೆ: ಕೆ.ಎಸ್.ಈಶ್ವರಪ್ಪ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಸೋತ ಬಳಿಕ ಅವರ ರಾಜಕೀಯ ಕತೆ ಮುಗಿದಂತೆ ಮತ್ತು ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾನೆ. ಅಲ್ಲಿಗೆ ಬಿಜೆಪಿಯಲ್ಲಿ ಅಪ್ಪ ಮಕ್ಕಳ ಕತೆ ಮುಗಿದಂತಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.


ಪಕ್ಷದಿಂದ ತಮ್ಮನ್ನು ಉಚ್ಚಾಟಿಸಿದರೂ ಕೆ.ಎಸ್ ಈಶ್ವರಪ್ಪ ಇಂದು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಮತ್ತೇ ಬಿಜೆಪಿಗೆ ಹೋಗ್ತೀರಾ ಅಂತ ಕೇಳಿದಾಗ ಲೋಕಸಭಾ ಚುನಾವಣೆಯಲ್ಲಿ ತಾನು ಗೆದ್ದ ಬಳಿಕ ಅವರಪ್ಪ ಬಂದು ತನ್ನನ್ನು ಪಕ್ಷಕ್ಕೆ ಕರೆದೊಯ್ಯುತ್ತಾನೆ ಎಂದು ಹೇಳಿದರು. ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ವಾಪಸ್ಸು ಕರೆತಂದರು, ಆದರೆ ನಾನು ಯಾವತ್ತೂ ಪಕ್ಷ ಬಿಟ್ಟು ಹೋಗುವ ಕೆಲಸ ಮಾಡಿಲ್ಲ ಯಾಕೆಂದರೆ ಇದು ನಾನು ಕಟ್ಟಿರುವ ಪಕ್ಷ, ಆದರೆ ಯಡಿಯೂರಪ್ಪ ಪಕ್ಷದಿಂದ ಆಚೆ ಹೋಗಿ ಕೆ.ಜೆ.ಪಿ ರಚಿಸಿದ್ದರು, ಹಾಗಾಗಿ ಬಿಜೆಪಿಯಲ್ಲಿ ಅವರು ಡೂಪ್ಲಿಕೇಟ್ ಎಂದು ಈಶ್ವರಪ್ಪ ಹೇಳಿದರು.

ರಾಜ್ಯ ಬಿಜೆಪಿಯನ್ನು ಅಪ್ಪ ಮಕ್ಕಳಿಂದ ಮುಕ್ತ ಮಾಡುವುದು ತನ್ನ ಗುರಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಸೋತ ಬಳಿಕ ಅವರ ರಾಜಕೀಯ ಕತೆ ಮುಗಿದಂತೆ ಮತ್ತು ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾನೆ ಅಲ್ಲಿಗೆ ಬಿಜೆಪಿಯಲ್ಲಿ ಅಪ್ಪ ಮಕ್ಕಳ ಕತೆ ಮುಗಿದಂತಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.

Admin

Leave a Reply

Your email address will not be published. Required fields are marked *

error: Content is protected !!