ಕೋರೊನ ಸೋಂಕಿಗೆ ಆಯುರ್ವೇದ ಚಿಕಿತ್ಸಾ ಕ್ಲಿನಿಕಲ್ ಟ್ರಯಲ್ ಗೆ ಡಬ್ಲ್ಯೂ ಎಚ್ ಓ ಅಸ್ತು..!

ಕೋರೊನ ಸೋಂಕಿಗೆ ಆಯುರ್ವೇದ ಚಿಕಿತ್ಸಾ ಕ್ಲಿನಿಕಲ್ ಟ್ರಯಲ್ ಗೆ ಡಬ್ಲ್ಯೂ ಎಚ್ ಓ ಅಸ್ತು..!

ನವ ದೆಹಲಿ : ಕರೋನ ಕ್ಲಿನಿಕಲ್ ಟ್ರಯಲ್’ಗೆ ಡಬ್ಲೂಎಚ್’ಓ ಸಮ್ಮತಿ ನೀಡಿದೆ.

ಆಧುನಿಕ ವೈಜ್ಞಾನಿಕ ಸಂಶೋಧನೆಗಳಿಂದ ಕರೋನಾ ಸಂಖ್ಯೆಗೆ ಪರಿಹಾರ ಸಿಗುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈಗ ಆಯುರ್ವೇದ ಚಿಕಿತ್ಸೆಯತ್ತ ದೃಷ್ಟಿ ಹರಿಸಿದೆ ಗಿಡಮೂಲಿಕೆ ಗಳ ಕ್ಲಿನಿಕಲ್ ಪರೀಕ್ಷೆಗೆ ಸಮ್ಮತಿ ನೀಡಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ.

ವಿಶ್ವಾದ್ಯಂತ ಹಬ್ಬಿರುವ ಕರೋನಾ ನಿಯಂತ್ರಣಕ್ಕೆ ಹೊಸ ಲಸಿಕೆಗಳನ್ನು ಕಂಡುಹಿಡಿಯುವ ಜೊತೆಯಲ್ಲಿ ಈಗಾಗಲೇ ಬಳಸುತ್ತಿರುವ ಔಷಧಗಳನ್ನು ಪ್ರಯೋಗಗಳು ನಡೆಯುತ್ತಿವೆ ಆದರೆ ಪರಿಣಾಮದ ನಿರ್ದಿಷ್ಟವಾಗಿ ಏನನ್ನು ಹೇಳಲಾಗದ ಸ್ಥಿತಿ ನಿರ್ಮಾಣವಾಗಿದೆ.

ಜೊತೆಗೆ ಔಷಧಗಳ ಬಳಕೆಯಿಂದಾಗುವ ಅಡ್ಡ ಪರಿಣಾಮಗಳು ಕುರಿತು ಜನರಲ್ಲಿ ಆತಂಕವಿದೆ.

ಇಂತಹ ಪರಿಸ್ಥಿತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುರ್ವೇದ ಹಾಗೂ ಗಿಡಮೂಲಿಕೆಗಳ ಹೋಮಿಯೋಪತಿ ಔಷಧ ಮತ್ತು ಪಾರಂಪರಿಕ ಔಷಧ ಬಳಸುವ ವಿಚಾರ ಜಾಗತಿಕವಾಗಿ ಚರ್ಚೆಗಳ ಪಟ್ಟಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಗಿಡಮೂಲಿಕೆಗಳ ಪರೀಕ್ಷೆ ಆರಂಭಕ್ಕೆ ಸಮ್ಮತಿ ಸೂಚಿಸಿದೆ.

ಕರ್ನಾಟಕದಲ್ಲೂ ಕರೋನಾ ಸೋಂಕಿತರ‌ ಮೇಲೆ ಆಯುರ್ವೇದ ಔಷಧ ಪ್ರಯೋಗಿಸಿ ಅನೇಕ‌ ಸೋಂಕಿತರಿಗೆ ಧನಾತ್ಮಕ ಫಲಿತಾಂಶ ಬಂದಿರುವುದು ಆಯುರ್ವೇದ ಔಷಧ ಮಹತ್ವ ಜಗತ್ತಿಗೆ ಸಾರಿದೆ.

ಶಿವಮೊಗ್ಗದ ಕೋರೋನ ಸೋಂಕಿತ ಸ್ವಾಮಿಜೀಯೊಬ್ಬರಿಗೆ ಆಯುರ್ವೇದ ಚಿಕಿತ್ಸೆ ನೀಡಿ‌ ಜಗತ್ತಿನಲ್ಲೇ ಮೊದಲ ಆಯುರ್ವೇದ ಚಿಕಿತ್ಸೆ ಮೂಲಕ ಕೊರೋನ ಗುಣ‌ಪಡಿಸಿದ ಕೀರ್ತಿ ಮಲೆನಾಡಿನ ಶಿವಮೊಗ್ಗದ ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆಯ ವೈಧ್ಯಾರಾದ ಡಾ.ಮಲ್ಲಿಕಾರ್ಜುನ ಡಂಬಳ‌ ಅವರಿಗೆ ಸಲ್ಲುತ್ತದೆ .

ಜಗತ್ತಿನ ಆಯ್ದ ಭಾಗಗಳಲ್ಲಿ ಒಂದು ಮತ್ತು ಎರಡನೇ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಗಿಡಮೂಲಿಕೆ ಔಷಧಗಳ ಬಳಕೆಗೆ ಡಬ್ಲ್ಯೂ ಎಚ್ ಓ ಅನುಮತಿ ನೀಡಿದೆ.

ಔಷಧಗಳ ಸುರಕ್ಷತೆಗೆ ಹಾಗೂ ಪರಿಣಾಮದ ಅಧ್ಯಯನ ನಡೆಸಿದ ನಂತರ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದೆಂದು ಷರತ್ತು ವಿಧಿಸಿದೆ.

ಒಟ್ಟಿನಲ್ಲಿ ಆಯುರ್ವೇದ ಚಿಕಿತ್ಸೆಗೆ ಡಬ್ಲೂಹೆಚ್ಓ ಕ್ಲಿನಿಕಲ್‌ ಟ್ರಯಲ್‌ಗೆ ಸಮ್ಮತಿ ಸೂಚಿಸಿದ್ದು ಸಂತಸ ವಿಷಾಯವಾಗಿದೆ.

Admin

Leave a Reply

Your email address will not be published. Required fields are marked *

error: Content is protected !!