ವೃದ್ಧ ಮಹಿಳೆಗೆ ಮಾಸ್ಕ್ ಆಹಾರ ನೀಡಿ ಮಾನವೀಯತೆ ಮೆರೆದ ಪೋಲಿಸ್ ಅಧಿಕಾರಿ..!

ವೃದ್ಧ ಮಹಿಳೆಗೆ ಮಾಸ್ಕ್ ಆಹಾರ ನೀಡಿ ಮಾನವೀಯತೆ ಮೆರೆದ ಪೋಲಿಸ್ ಅಧಿಕಾರಿ..!


ಶಿಕಾರಿಪುರ ಕೊರೊನಾ ವೈರಸ್ ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಓಡಾಡುವ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವುದು ಸಾಮಾನ್ಯವಾಗಿದೆ ಆದರೆ ಪಟ್ಟಣ ಠಾಣೆ ಪಿಎಸ್‌ಐ ರಾಜುರೆಡ್ಡಿ ವೃದ್ಧ ಮಹಿಳೆಯೊಬ್ಬರಿಗೆ ಆಹಾರ ಪದಾರ್ಥ, ಮಾಸ್ಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ದೊಡ್ಡಪೇಟೆ ರಸ್ತೆಯಲ್ಲಿ ಶುಕ್ರವಾರ ಪೊಲೀಸ್ ಗಸ್ತು ವಾಹನದಲ್ಲಿ ಹೋಗುತ್ತಿರುವಾಗ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೃದ್ಧ ಮಹಿಳೆ ಬಳಿ ತೆರಳಿದ ಪಿಎಸ್‌ಐ ಆಕೆಗೆ ಮೊದಲು ನೀರು, ಜೂಸ್ ಕುಡಿಯಲು ನೀಡಿದ್ದಲ್ಲದೆ ಹಣ್ಣನ್ನೂ ನೀಡಿ ಆಕೆಗೆ ಮಾಸ್ಕ್ ನೀಡಿದರು.

ಜತೆಯಲ್ಲಿದ್ದ ಸಿಬ್ಬಂದಿ ಮಲ್ಲೇಶಪ್ಪ ಮತ್ತಿತರರು ಆಕೆ ಯಾವ ಊರು ಮಕ್ಕಳಿದ್ದಾರ ಎಂದು ವಿಚಾರಿಸಿ ಆಕೆಯ ಗ್ರಾಮವಾದ ತಾಲೂಕಿನ ಬಳೂರಿಗೆ ತೆರಳುವುದಕ್ಕೆ ವ್ಯವಸ್ಥೆ ಕಲ್ಪಿಸಿದರು.

ತಾಲೂಕಿನ ಬಹುತೇಕ ವಾಟ್ಸ್ಅಪ್ ಗ್ರೂಪ್‌ನಲ್ಲಿ ವಿಡಿಯೋ ಶೇರ್ ಆಗಿದ್ದು ಬಹುತೇಕರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂರಾರು ಯುವಕರ ಸ್ಟೇಟಸ್‌ನಲ್ಲೂ ಅದು ಸ್ಥಾನ ಪಡೆದಿರುವುದು ವಿಶೇಷ. ಪಿಎಸ್‌ಐ ಕರ‍್ಯಕ್ಕೆ ತಹಸೀಲ್ದಾರ್, ಡಿವೈಎಸ್‌ಪಿ, ವೃತ್ತ ನಿರೀಕ್ಷಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Admin

Leave a Reply

Your email address will not be published. Required fields are marked *

error: Content is protected !!