ಶಿಕಾರಿಪುರ: ಸುಣ್ಣದಕೊಪ್ಪದ ವ್ಯಕ್ತಿಯ ಅಸ್ವಭಾವಿಕ ಮರಣ ತನಿಕೆಗೆ ಆದೇಶ..!
ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಚೆರ್ಚೆಗೆ ಗ್ರಸವಾಗಿದೆ ಹಿರೇಕೆರೂರು ಗಡಿಭಾಗದ ಸುಣ್ಣದಕೊಪ್ಪ ಗ್ರಾಮದ ಚೆಕ್ ಪೋಸ್ಟ್ ಬಳಿ ಪೋಲಿಸರ ಲಾಠಿಯಿಂದ ಹೊಡೆದ ಪರಿಣಾಮದಿಂದ ಮೃತ ಪಟ್ಟಿದ್ದಾರೆ ಎಂದು ಮೃತ ಕುಟುಂಬದವರು ಆರೋಪಿಸಿದ್ದು ಸುಣ್ಣದಕೊಪ್ಪದ ಗ್ರಾಮದ ವಾಸಿಯಾದ ಲಕ್ಷ್ಮಣ್ ನಾಯ್ಕ್ ತಂದೆ ಸೋಮಲ ನಾಯ್ಕ್( 57) ವರ್ಷ ಮೃತಪಟ್ಟ ವ್ಯಕ್ತಿ
ಏನಿದು ಪ್ರಕರಣ:
ಮೃತ ವ್ಯಕ್ತಿಯೇ ಬೇರೆ ಪೋಲಿಸರು ಓಡೆದ ವ್ಯಕ್ತಿಯೇ ಬೇರೆ ಮೃತ ವ್ಯಕ್ತಿಯ ಮಗ ರಾಮಚಂದ್ರ ನಾಯ್ಕ್ ರಾತ್ರಿವೇಳೆಯಲ್ಲಿ ತಮ್ಮ ಗ್ರಾಮದ ಚೇಕ್ ಪೋಸ್ಟ್ ಬಳಿ ಪದೇಪದೇ ಓಡಾಡುತ್ತಿದ್ದರು ನಿಷೇಧಜ್ಞೆ ಜಾರಿಯಲ್ಲಿ ಇದ್ದರೂ ರಾತ್ರಿವೇಳೆ ಅನವಶ್ಯಕವಾಗಿ ಓಡಾಡುವು ಕಾನೂನು ಉಲ್ಲಂಘನೆ ಎಂದು ಕರ್ತವ್ಯ ನಿರತ ಪೋಲಿಸರು ತಿಳಿಸಿದ್ದಾರೆ ಅದರೆ ರಾಮಚಂದ್ರ ನಾಯ್ಕ್ ಉದ್ದಟತನದಿಂದ ವರ್ತಿಸಿದ್ದಾರಿಂದ ಪೋಲಿಸರು ಲಾಠಿಯಿಂದ ಹೊಡೆದಿದ್ದಾರೆ ಈ ಸಮಯದಲ್ಲಿ ಮೃತ ವ್ಯಕ್ತಿ ಲಕ್ಷ್ಮಣ ನಾಯ್ಕ್ ಸ್ಥಳಕ್ಕೆ ಆಗಮಿಸಿ ಪೋಲಿಸರಿಗೆ ಹೊಡೆಯದಂತೆ ಮನವಿ ಮಾಡಿದ್ದು ನಂತರ ಬಿಟ್ಟು ಕಳುಹಿಸಿದ್ದಾರೆ.
ರಾತ್ರಿ ಲಕ್ಷ್ಮಣ ನಾಯ್ಕ್ ಮನೆಯ ಬಳಿ ಬಿದ್ದು ಹೊದಾಡುತ್ತಿದ್ದು ನಂತರ ಲಕ್ಷ್ಮಣ್ ನಾಯ್ಕ್ ರನ್ನು ಶಿರಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರ ಬಳಿ ತೋರಿಸಿದಾಗ ಲಕ್ಷ್ಮಣ್ ನಾಯ್ಕ್ ಮೃತ ಪಟ್ಟಿದ್ದಾರೆ.
ಈ ಕುರಿತು ಡಿವೈಎಸ್ ಪಿ ಶಿವನಾಂದ ಪ್ರತಿಕ್ರೀಯೆ ನೊಡಿದ್ದು ಪೋಲಿಸರ ಲಾಠಿ ಏಟಿಗೆ ಮೃತ ಪಟ್ಟಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದ್ದು ಸಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು ಇಸಿಜಿ ಮಾಡಿದಾಗ ದೇಹದ ಮೇಲೆ ದುಂಡನೆ ಆಕಾರದ ಗುರುತು ಮೂಡುತ್ತದೆ ಅದರೆ ಕೆಲವರು ಪೋಲಿಸರ ಏಟಿಗೆ ಈ ರೀತಿ ಗುರುತ್ತು ಮೂಡಿದೆ ಎನ್ನುತ್ತಿದ್ದಾರೆ ಶವ ಪರೀಕ್ಷೆಗೆ ನಡೆದಿದ್ದು ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ ಎಂದರು.
ಮೃತ ಕುಟುಂಬದವರು ಯಾವುದೇ ದೂರು ಕೂಡ ನೀಡಿಲ್ಲ ಅದರೆ ಕೆಲವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಪೋಲಿಸರ ಲಾಠಿಗೆ ವ್ಯಕ್ತಿ ಬಲಿ ಎಂದು ಸುದ್ದಿ ಹರಿದಾಡುತ್ತಿದೆ ಸ್ಥಳಕ್ಕೆ ತಹಶೀಲ್ದಾರ್ ಎಂ.ಪಿ ಕವಿರಾಜ್ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಾಳಕೊಪ್ಪ ಪಟ್ಟಣ ಠಾಣೆಯಲ್ಲಿ ಅಸ್ವಭಾವಿಕ ಪ್ರಕರಣ ದಾಖಲಾಗಿದ್ದು ಪೋಲಿಸರು ತನಿಖೆ ಕೈಗೊಂಡಿದ್ದಾರೆ.