ಶಿಕಾರಿಪುರ: ಗ್ರೇಡ್ -2 ತಹಶೀಲ್ದಾರ್ ಶೈಲಜಾ ಎಂ.ಎಸ್ ವರ್ಗಾವಣೆ..!

ಶಿಕಾರಿಪುರ: ಗ್ರೇಡ್ -2 ತಹಶೀಲ್ದಾರ್ ಶೈಲಜಾ ಎಂ.ಎಸ್ ವರ್ಗಾವಣೆ..!

ಶಿಕಾರಿಪುರ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಡ್ -2 ತಹಶೀಲ್ದಾರ್ ಶೈಲಾಜಾ ಎಂ.ಎಸ್ ಅವರು ನಿನ್ನೆ ಶಿಕಾರಿಪುರದಿಂದ ಶಿರಸಿ ಎಸಿ ಕಛೇರಿಗೆ ವರ್ಗಾವಣೆಯಾಗಿದ್ದಾರೆ.

ಶಿಕಾರಿಪುರ ತಹಶೀಲ್ದಾರ್ ಕಛೇರಿಯಲ್ಲಿ ಕಳೆದ 5 ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತದ ಅವರು ಸಾರ್ವಜನಿಕ ಮೇಚ್ಚುಗೆಗೆ ಪಾತ್ರರಾಗಿದ್ದು ಸಿಬ್ಬಂಧಿಗಳಿಗೂ ಪ್ರೀತಿ ವಿಶ್ವಾಸದಿಂದ ನೊಡುತ್ತಿದ ಅವರು ಕಛೇರಿಯ ಎಲ್ಲಾ ಸಿಬ್ಬಂಧಿಗಳಿಗೂ ಪ್ರೀಯವಾಗಿದ್ದರು.

ಗುರುವಾರ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಎಂ.ಪಿ ಕವಿರಾಜ್ ಅವರ ನೇತೃತ್ವದಲ್ಲಿ ವರ್ಗವಣೆಗೊಂಡ ಶೈಲಾಜಾ ಎಂ.ಎಸ್ ಅವರಿಗೆ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂಧಿಗಳು ಸೇರಿ ಸನ್ಮಾನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಎಂ.ಪಿ ಕವಿರಾಜ್ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕಾಗದರೇ ಸಾಕಷ್ಟು ತಾಳ್ಮೆ, ಸಹನಶೀಲತೆ ಇರಬೇಕು ಮೇಡಮ್ ಈ ಎರಡನ್ನು ರೂಢಿಸಿಕೊಂಡಿದ್ದರು.

ಸಾರ್ವಜನಿಕರಿಂದ ಯಾವುದೇ ದೂರು ಬಂದರು ಅದನ್ನು ತಕ್ಷಣ ಸರಿಪಡಿಸುತ್ತಿದ್ದರು ಸಿಬ್ಬಂಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸಿದ್ದರು ಅವರ ಸೇವೆ ಜನ ಮೇಚ್ಚಿಗೆಗೆ ಕಾರಣವಾಗಿದೆ ತಮ್ಮ ಕಛೇರಿ ಒಬ್ಬ ಉತ್ತಮ ಅಧಿಕಾರಿಯನ್ನು ಕಳೆದುಕೊಳ್ಳುತ್ತಿದೆ ಎಂಬ ಬೇಸರವಿದೆ ಅದರೂ ಸರ್ಕಾರಿ ಕೆಲಸ ಜನರ ಸೇವೆಗಾಗಿ ನಾವು ಯಾವುದೇ ಸ್ಥಳದಲ್ಲಿ ಅದರು ಸೇವೆ ಮಾಡಲು ಸಿದ್ದರಿರಬೇಕು ಮುಂದಿನ ದಿನಗಳಲ್ಲಿ ಅವರ ಸೇವಾಕಾರ್ಯ ಇದೆ ರೀತಿ ಮುಂದುವರಿಯಲ್ಲಿ ಎಂದರು.

ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಶೈಲಾಜಾ ಎಂ.ಎಸ್ ಮಾತನಾಡಿ ನಮ್ಮ ಊರಿಗೆ ಹತ್ತಿರ ಇರುವುದರಿಂದ ಅಲ್ಲಿ ಸ್ಥಳ ಕಾಲಿ ಇರುವುದರಿಂದ ನಾನೆ ವರ್ಗವಣೆ ಬಯಸಿದೆ ಶಿಕಾರಿಪುರಕ್ಕೆ ಮೊದಲು ಬರುವಾಗ ಭಯ ಕಾಡಿತು ಅದರೆ ತಾಲೂಕಿನ ಜನತೆ ಹಾಗೂ ಸಿಬ್ಬಂದಿಗಳ ಸಹಕಾರದಿಂದ 5 ವರ್ಷಗಳ ಇಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಮರೆಯುವಂತಿಲ್ಲ ಇಷ್ಟು ದಿನ ನನ್ನ ಸೇವೆಗೆ ಸಹಕಾರಿಸಿದ ಎಲ್ಲಾ ಸಿಬ್ಬಂಧಿಗಳಿಗೆ ಅಧಿಕಾರಿಗಳಿಗೆ , ಸಾರ್ವಜನಿಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕ್ ಕಛೇರಿಯ ಸಿಬ್ಬಂಧಿಗಳು ಎಲ್ಲಾ ಗ್ರಾಮ ಲೇಕ್ಕಿಗರು ಸಾರ್ವಜನಿಕರು ಇದ್ದರು.

Admin

Leave a Reply

Your email address will not be published. Required fields are marked *

error: Content is protected !!