ಶಿಕಾರಿಪುರ: ಹಿರಿಯ ಪತ್ರಕರ್ತರಾದ ಎಸ್ ಬಿ ಮಠದ್ ರವರಿಗೆ ಕಿಡಿ ಶೇಷಪ್ಪ ಪ್ರಶಸ್ತಿ…!

ಶಿಕಾರಿಪುರ: ಹಿರಿಯ ಪತ್ರಕರ್ತರಾದ ಎಸ್ ಬಿ ಮಠದ್ ರವರಿಗೆ ಕಿಡಿ ಶೇಷಪ್ಪ ಪ್ರಶಸ್ತಿ…!

ಶಿಕಾರಿಪುರ: ಪಟ್ಟಣ ಹಿರಿಯ ಪತ್ರಕರ್ತರು ಸರ್ವಜ್ಞ ಪತ್ರಿಕೆಯ ಸಂಪಾದಕಾರದ ಎಸ್ ಬಿ ಮಠದ್ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡು ಕಿಡಿ ಶೇಷಪ್ಪ ಪ್ರಶಸ್ತಿಗೆ ಭಾಜನಾರಾಗಿದ್ದು ತಾಲೂಕ್ ಘಟಕದ ವತಿಯಿಂದ ಅವರಿಗೆ ಅಭಿನಂದಿಸಲಾಯಿತು.

ಪತ್ರಿಕಾ ಕ್ಷೇತ್ರದಲ್ಲಿನ ಜೀವಮಾನದ ಸಾಧನೆ ಮತ್ತು ಪರಿಣಾಮಕಾರಿಯಾಗಿ ಪತ್ರಿಕ್ಯೋದಮದಲ್ಲಿ ಸಣ್ಣ ಪತ್ರಿಕೆಯಿಂದ ಸಮಾಜವನ್ನು ತಿದ್ದುವ ಹಾಗೂ ಸಮಾಜದಲ್ಲಿನ ಕ್ರಾಂತಿಕಾರಕ ಬದಲಾವಣೆಗೆ ಮಾಡಿದ ಪತ್ರಕರ್ತರನ್ನು ಗುರುತಿಸಿ ನೀಡುವ ಪ್ರಶಸ್ತಿ ಇದಾಗಿದು.

 ಬಧವಾರ ಪತ್ರಿಕಾ ಭವನದಲ್ಲಿ ತಾಲೂಕ್ ಸಂಘದ ವತಿಯಿಂದ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು ಇದೆ ವೇಳೆ ಜಿಲ್ಲಾ ಸಂಘದ ಕಾರ್ಯದರ್ಶಿ ಕೆ.ಹೆಚ್ ಹುಚ್ಚರಾಯಪ್ಪ ತಾಲೂಕ್ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹೆಚ್ ಆರ್ ಸರ್ವ ಸದಸ್ಯರು ರಾಜ್ಯ ಸಂಘದ ಪರವಾಗಿ ಇದೆ ತಿಂಗಳ 7-8 ರಂದು ಮಂಗಳೂರಿನಲ್ಲಿ ನಡೆಯಲಿರುವ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಸನ್ಮಾನ ನಡೆಯಲಿದ್ದು ಕಾರ್ಯಕ್ರಮಕ್ಕೆ ಸನ್ಮಾನಿತರಾದ ಎಸ್ ಬಿ ಮಠದ್ ಅವರಿಗೆ ಆಹ್ವಾನ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಹುಚ್ಚರಾಯಪ್ಪ ಮಾತನಾಡಿ ಮಠದ್ ಅವರು ನಮ್ಮ ಸಂಘದ  ಅನುಮಾನ ಅವಮಾನಗಳಿಗೆ ಸನ್ಮಾನ ಯಾವ ವ್ಯಕ್ತಿ ನೇರ ನಿಷ್ಠುರವಾಗಿ ಸಮಾಜದ ಪರವಾಗಿ ಕೆಲಸ ಮಾಡುತ್ತಾರೋ ಅವರಿಗೆ ಸಮಾಜದಲ್ಲಿ ಅವಮಾನಗಳು, ಅನುಮಾನ ಇವುಗಳನ್ನು ದಾಟಿ ಅವರ ಸಾಧನೆ ಪ್ರಾಮಾಣಿಕ ಶ್ರಮಕ್ಕೆ ಸನ್ಮಾನವೇ ಉತ್ತರವಾಗಿರುತ್ತದೆ  ಕಿಡಿ ಶೇಷಣ್ಣ ಪ್ರಶಸ್ತಿ ಮಠದ ಅವರು ಜೀವಮಾನದ ಸಾಧನೆಯನ್ನು ಪತ್ರಿಕೆ ಒಳ್ಳೇಯ ಕೆಲಸಗಳ ಗುರುತಿಸವ ಕೆಲಸ ಇಂದು ನಡೆದಿದೆ ಎಂದರು.

ಮಠದ್ ಅವರು ಸಣ್ಣ ಪತ್ರಿಕೆಯನ್ನು ಸಂಪಾದಿಸಿಕೊಂಡು ಶಿಕಾರಿಪುರದಂತ ಊರಿನಲ್ಲಿ ಸ್ವತಃ ಮುದ್ರಿಸಿ ಬಸ್ ನಿಲ್ಧಾಣಗಳಲ್ಲಿ ಪತ್ರಿಕೆಗಳನ್ನು ಹಂಚುತ್ತಿದ್ದರು ಯಾವುದೇ ಭಯವಿಲ್ಲದೇ ನಿರ್ಭಯವಾಗಿ ಬರೆಯುತ್ತಿದ್ದರು ಆರ್ ಎಸ್ ಎಸ್ ಮತ್ತು ಜನಸಂಘದಲ್ಲಿ ಶಿಕಾರಿಪುರದಲ್ಲಿ ಪಕ್ಷವನ್ನು ಹಳ್ಳಿ ಹಳ್ಳಿಯಲ್ಲೂ ಸಂಘಟಿಸಿ ಭದ್ರ ಬೂನಾದಿ ಹಾಕಿದರು ತಾಲೂಕಿನ ರೈಲ್ವೆ ಯೋಜನೆಗಾಗಿ ಮೊದಲಿಂದಲ್ಲೂ ಹೋರಾಟವನ್ನು ಮಾಡಿಕೊಂಡು ಬಂದವರು ಅವರ ಸೇವಾ ಕಾರ್ಯಕ್ಕೆ ಈ ಪ್ರಶಸ್ತಿ ತಡವಾಗಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಬಿ ಮಠದ್ ಮಾತನಾಡಿ ಶಿಕಾರಿಪುರ ತಾಲೂಕಿನ ಪತ್ರಕರ್ತರ ಜನರ ವಿಶ್ವಾಸ ಅಭಿಮಾನದಿಂದ ಈ ಪ್ರಶಸ್ತಿ ದೊರೆತಿದ್ದು  ಸಂಘದ ಎಲ್ಲಾ ಸದಸ್ಯರಿಗೂ ಹಾಗೂ ರಾಜ್ಯ ಸಂಘದ ಪಧಾದಿಕಾರಿಗಳು ಸದಸ್ಯರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ, ಜಿಲ್ಲಾ ಸಂಘದ ಗ್ರಾ.ಕಾರ್ಯದರ್ಶಿ ಕೆ.ಎಸ್ ಹುಚ್ರಾಯಪ್ಪ,ಸದಸ್ಯ ಎಸ್ ಬಿ ಅರುಣಕುಮಾರ್, ತಾ.ಘಟಕದ ಅದ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಇ.ಎಚ್ ಬಸವರಾಜ್,ಕಾರ್ಯದರ್ಶಿ ಚಂದ್ರಶೇಖರ್ ಮಠದ್,ಪ್ರೇಸ್ ಟ್ರಸ್ಟ್ ಅಧ್ಯಕ್ಷ ಬಿ.ಎಲ್ ರಾಜು, ಬಾಲ ಕೃಷ್ಣಜೋಯಿಸ್, ಕೋಟೇಶ್ವರ, ರಾಜಾರಾವ್ ಜಾಧವ್,  ಮಂಜುನಾಥ್ ಮಠದ್ , ಕಾಳಿಂಗರಾವ್,ರಘು ಶಿಕಾರಿ,ಪ್ರಕಾಶ್,  ಪ್ರದೀಪ ದೀಕ್ಷಿತ್,ಎಚ್ ಕೆ ಪ್ರಕಾಶ್, ಇದ್ದರು.

Admin

Leave a Reply

Your email address will not be published. Required fields are marked *

error: Content is protected !!