ಶಿವಮೊಗ್ಗ: ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂಕು ನುಗ್ಗಲು ಕಾಲ್ತುಳಿತಕ್ಕೆ ಅಮಾಯಕರ ಸಾವು ಸಂಭವಿಸಿದ್ದು ನಿನ್ನೆ ದಿನ ರಾತ್ರಿ ಶಿವಮೊಗ್ಗ ದಲ್ಲಿ ಲಘು ಲಾಠಿ ಪ್ರಹಾರ ಮಾಡಿ ಬಿಗಿಯಾದ ಕ್ರಮ ಜರುಗಿಸಿರುವುದು ಸೂಕ್ತ ನಿರ್ಧಾರ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಒಂದು ಸಣ್ಣ ಘಟನೆ ಶಿವಮೊಗ್ಗದ ಶಾಂತಿ ನೆಮ್ಮದಿಯನ್ನೇ ಬುಡ ಮೇಲು ಮಾಡಿಬಿಡುತ್ತದೆ ಈ ಹಿಂದಿನ ಹಲವಾರು ಘಟನೆಗಳು ನಮಗೆ ಪಾಠವಾಗಿದ್ದು ನಿನ್ನೆ ರಾತ್ರಿ ಬೈಕ್ ಅಪಘಾತದಲ್ಲಿ ಒರ್ವ ಯುವಕ ಸಾವನ್ನಪ್ಪಿದ್ದು ಇದರಿಂದ ಎಚ್ಚೆತ್ತ ಶಿವಮೊಗ್ಗ ಪೊಲೀಸರು ಲಾಠಿ ಚಾರ್ಜ್ ಕ್ರಮ ಜರುಗಿಸಿದ್ದಾರೆ .
ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿ ಪಾಟೀಲ್ ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಕೆಎಸ್ಆರ್ ಪಿ ತುಕಡಿಯ ಸಮಯೋಜಿತ ಕ್ರಮಕ್ಕೆ ಶಿವಮೊಗ್ಗ ನಗರ ಜನತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
News by: Raghu Shikari-7411515737