ಜನರ ಭಾವನೆಗಳನ್ನು ನೋಯಿಸಲು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಬೇಡಿ- ನಟ ಕಮಲ ಹಾಸನ್ ವಿರುದ್ಧ ಹೈಕೋರ್ಟ್ ತರಾಟೆ..!

ಜನರ ಭಾವನೆಗಳನ್ನು ನೋಯಿಸಲು ಅಭಿವ್ಯಕ್ತಿ ಸ್ವಾತಂತ್ರ‍್ಯ ಬಳಸಬೇಡಿ- ನಟ ಕಮಲ ಹಾಸನ್ ವಿರುದ್ಧ ಹೈಕೋರ್ಟ್ ತರಾಟೆ..!
Facebook
Twitter
LinkedIn
WhatsApp

ಬೆಂಗಳೂರು: ಕನ್ನಡ ಭಾಷೆಯ ಮೂಲದ ಬಗ್ಗೆ ನಟ ಕಮಲ್‌ಹಾಸನ್ ನೀಡಿದ ವಿವಾದಾತ್ಮಕ ಹೇಳಿಕೆಗೆ ಉಚ್ಚನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ತಮ್ಮ ತಪ್ಪಿಗೆ ಪೊಲೀಸರು ಯಾಕೆ ಭದ್ರತೆ ನೀಡಬೇಕು ಎಂದು ನ್ಯಾಯಾಲಯ ಪ್ರಶ್ನಿಸಿದೆ. ಭಾವನೆಗಳನ್ನು ನೋಯಿಸಲು ಮಾತಿನ ಹಕ್ಕನ್ನು ಬಳಸಬೇಡಿ ಎಂದು ಹೇಳಿದೆ.

ಕರ್ನಾಟಕದಲ್ಲಿನ ಚಿತ್ರಮಂದಿರಗಳೂ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ತಮ್ಮ ಥಗ್‌ಲೈಫ್ ಚಿತ್ರದ ಪ್ರದರ್ಶನಕ್ಕೆ ಭದ್ರತೆ ಕೋರಿ ಕಮಲಹಾಸನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಜನರಿಂದ ಲಾಭಗಳಿಸಲು ಬಯಸುವ ನೀವು ಕ್ಷಮೆಯಾಚಿಸುವುದಿಲ್ಲ ಎಂದಾದರೆ ಚಿತ್ರವನ್ನು ಬಿಡುಗಡೆ ಮಾಡಲು ಯಾಕೆ ಬಯಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಕ್ಷಮೆಯಾಚಿಸುವ ಕುರಿತಂತೆ ಕಮಲಹಾಸನ್ ನಿಲುವನ್ನು ಸ್ಪಷ್ಟಪಡಿಸುವಂತೆ ಅವರ ಪರ ವಕೀಲರಿಗೆ ತಿಳಿಸಿದೆ.