ಶಿಕಾರಿಪುರ: ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ನೌಕರ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದಾರೆ.
ಈ ವೇಳೆ ತಾಲೂಕ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸಾದ್ ಮಾತನಾಡಿ ಪೌರ ಕಾರ್ಮಿಕರು ಹಾಗೂ ಪೌರ ನೌಕರರು ಪುರಸಭೆ ಮುಂಭಾಗದ ಹೊರ ಗುತ್ತಿಗೆ ಪದ್ಧತಿ ಸ್ಥಗಿತಗೊಳಿಸಿ, ಪೌರ ಕಾರ್ಮಿಕರನ್ನು, ನೌಕರರನ್ನು ಕಾಯಂಗೊಳಿಸಬೇಕು.

ಜೀವನ ಭದ್ರತೆ ಇಲ್ಲದೆ, ಅನೇಕ ವರ್ಷಗಳಿಂದಲೂ ಪೌರ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಇಲ್ಲದಿದ್ದರೆ, ಮುಷ್ಕರ ಹಿಂಪಡೆಯುವುದಿಲ್ಲ ಎಂದರು.
ಪೌರಕಾರ್ಮಿಕ ಐಟಿ , ಸಿಬ್ಬಂದಿ ಅಕೌಂಟೆಂಟ್ ಕನ್ಸಲ್ಟೆಂಟ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸ್ಯಾನಿಟರಿ ಸುಪ್ರವೈಸರ್ ಹಾಗೂ ಇತರ ವಿರುದ್ಧದ ನೌಕರರ ಪೌರಸೇವಾ ನೌಕರರೆಂದು ಪರಿಗಣಿಸಬೇಕು

ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಬೇಕು ಹಾಗೂ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ನೌಕರರನ್ನು ಸಕ್ರಿಯಗೊಳಿಸಬೇಕು ಪೌರಡಾಳಿತ ಇಲಾಖೆಯಲ್ಲಿ ಪೌರ ಕಾರ್ಮಿಕರ 100% ನೇಮಕಾತಿ ಮಾಡಬೇಕು ಹಾಗೂ ಇನ್ನೂ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಸುನಾಂದ ಮಂಜುನಾಥ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ಮನವಿಯನ್ನು ಸ್ವೀಕರಿಸಿದರು.