ರಾಜ್ಯದ ಐದು ನವೀಕೃತ ರೈಲು ನಿಲ್ದಾಣಗಳು ನಾಳೆ ಪ್ರಧಾನಿಯಿಂದ ವರ್ಚ್ಯುಯಲ್ ಮೂಲಕ ಲೋಕಾರ್ಪಣೆ

ರಾಜ್ಯದ ಐದು ನವೀಕೃತ ರೈಲು ನಿಲ್ದಾಣಗಳು ನಾಳೆ ಪ್ರಧಾನಿಯಿಂದ ವರ್ಚ್ಯುಯಲ್ ಮೂಲಕ ಲೋಕಾರ್ಪಣೆ
Facebook
Twitter
LinkedIn
WhatsApp

ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ಅತ್ಯಾಧುನಿಕ ಸೌಲಭ್ಯಗಳಿಂದ ನವೀಕೃತಗೊಳಿಸಲಾಗಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಐದು ರೈಲು ನಿಲ್ದಾಣಗಳನ್ನು ವರ್ಚ್ಯುಯಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.

ಈ ಪೈಕಿ ಬೆಳಗಾವಿಯ ಗೋಕಾಕ ರೋಡ್ ರೈಲು ನಿಲ್ದಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮಾರುಕಟ್ಟೆಯ ಆಕರ್ಷಣೆ ಹಾಗೂ ಗೋಕಾಕ ಫಾಲ್ಸ್ ದಂತಹ ಪ್ರವಾಸಿ ಕೇಂದ್ರದ ದೃಷ್ಟಿಯಿಂದ ವಿಶೇಷ ಮಹತ್ವ ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾಗಿರುವ ಗೋಕಾಕ ರೋಡ್ ನಿಲ್ದಾಣ 17 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಾಗತಿಕ ಮಟ್ಟದ ಸೌಲ್ಯಗಳ ಮೂಲಕ ನವೀಕೃತಗೊಂಡು ವಿಶೇಷ ಗಮನ ಸೆಳೆಯುತ್ತಿದೆ.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,ಮಾತನಾಡಿ ಪ್ರಮುಖ ರೈಲು ನಿಲ್ದಾಣವಾಗಿರುವ ಗೋಕಾಕ ರೋಡ್ ನಿಲ್ದಾಣ ನವೀಕರಣದಿಂದ ವ್ಯಾಪಾರಸ್ಥರಿಗೆ, ರೈತರಿಗೆ, ಕಾರ್ಮಿಕರಿಗೆ, ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ. ಎಂದು ತಿಳಿಸಿದ್ದಾರೆ.

News by: Raghu Shikari-7411515737