ದೇಶದ ಪವಿತ್ರ ಚಾರ್‌ಧಾಮ್ ಯಾತ್ರೆ ನಾಳೆಯಿಂದ ಆರಂಭ

ದೇಶದ ಪವಿತ್ರ ಚಾರ್‌ಧಾಮ್ ಯಾತ್ರೆ ನಾಳೆಯಿಂದ ಆರಂಭ
Facebook
Twitter
LinkedIn
WhatsApp

ಭಾರತದ ಅತ್ಯಂತ ಪವಿತ್ರ ತೀರ್ಥಯಾತ್ರೆಯಲ್ಲಿ ಒಂದಾದ ಉತ್ತರಾಖಂಡದಲ್ಲಿ ನಡೆಯುವ ಚಾರ್‌ಧಾಮ್ ಯಾತ್ರೆ ನಾಳೆ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಆರಂಭವಾಗಲಿದೆ.

ಉತ್ತರ ಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಬಾಗಿಲು ತೆರೆಯುವುದರೊಂದಿಗೆ ಯಾತ್ರೆ ಆರಂಭವಾಗಲಿದೆ. ರುದ್ರಪ್ರಯಾಗ್ ಜಿಲ್ಲೆಯ ಕೇದರಾನಾಥ ದೇವಾಲಯದ ದ್ವಾರಗಳು ಮೇ 2 ರಂದು ಹಾಗೂ ಚಮೋಲಿ ಜಿಲ್ಲೆಯ ಬದರಿನಾಥ್ ಧಾಮದ ಬಾಗಿಲುಗಳು ಮೇ 4 ರಂದು ತೆರಯಲಿದೆ.

ವೈದಿಕ ಸ್ತೋತ್ರಗಳು ಮತ್ತು ಇತರೆ ಧಾರ್ಮಿಕ ಆಚರಣೆಗಳ ನಡುವೆ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ದ್ವಾರಗಳು ನಾಳೆ ತೆರೆಯಲಿವೆ. ಯಾತ್ರಿಕರ ಅನುಕೂಲಕ್ಕಾಗಿ ಉತ್ತರಾಖಂಡ ಸರ್ಕಾರ, ಸಕಲ ಸಿದ್ಧತೆ ಕೈಗೊಂಡಿದೆ.

ಭದ್ರತೆ, ಸಂಚಾರ ನಿರ್ವಹಣೆ, ಜನಸಂದಣಿ ನಿಯಂತ್ರಣ, ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ವಿಶೇಷ ಗಮನ ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಚಾರ್‌ಧಾಮ್ ಯಾತ್ರೆಗೆ ದೇಶ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

News By: Raghu Shikari-7411515737