ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಇಳಿಜಾರಿನ ಮನೆಯೊಂದರ ಮೇಲೆ ಸರ್ಕಾರಿ ಬಸ್ ಉರುಳಿಬಿದ್ದು ಸುಮಾರು 20 ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ
ಜಿಲ್ಲೆಯ ಕೊಪ್ಪ ತಾಲೂಕಿನ ಜಲದುರ್ಗ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.

ಬೆಂಗಳೂರಿನಿಂದ ಶೃಂಗೇರಿಗೆ ಬರುತಿದ್ದ ಬಸ್ ಅಪಘಾತಕೀಡಾಗಿದ್ದು ಬಸ್ಸಿನಲ್ಲಿ 50 ಕ್ಕು ಹೆಚ್ಚು ಪ್ರಯಾಣಿಕರು ಪ್ರಯಾಣಿಸುತಿದ್ದರು.
ಅಪಘಾತದಿಂದ ಮನೆಗು ಹಾನಿಯುಂಟಾಗಿದೆ. ಇನ್ನು ಗಾಯಗೊಂಡ ಪ್ರಯಾಣಿಕರನ್ನು ಕೊಪ್ಪ, ಎನ್.ಆರ್ ಪುರದ ಆಸ್ಪತ್ರೆಗಳೀಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಯಪುರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.