ಚಿಕ್ಕಮಗಳೂರು ಜಿಲ್ಲಾ‌ ಪ್ರವಾಸ ಮಾರ್ಚ್ 15 ರಿಂದ 17 ವರೆಗೆ ತಾತ್ಕಾಲಿಕ ನಿರ್ಬಂಧ..!

ಚಿಕ್ಕಮಗಳೂರು ಜಿಲ್ಲಾ‌ ಪ್ರವಾಸ ಮಾರ್ಚ್ 15 ರಿಂದ 17 ವರೆಗೆ ತಾತ್ಕಾಲಿಕ ನಿರ್ಬಂಧ..!
Facebook
Twitter
LinkedIn
WhatsApp

ಚಿಕ್ಕಮಗಳೂರು ಜಿಲ್ಲಾಡಳಿತವು ಮಾರ್ಚ್ 15 ರಿಂದ 17 ರವರೆಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಈ ನಿರ್ಬಂಧವು ಚಂದ್ರದ್ರೋಣ ಪರ್ವತ ಸರಣಿಯ ಪ್ರಮುಖ ಪ್ರವಾಸಿ ತಾಣಗಳಾದ ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರಾ ಮತ್ತು ಝರಿಫಾಲ್ಸ್ ಗೆ ಅನ್ವಯಿಸುತ್ತದೆ.

ದತ್ತಪೀಠದಲ್ಲಿ ನಡೆಯಲಿರುವ ಉರುಸ್ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳ ಹೆಚ್ಚಿನ ಸಂಖ್ಯೆಯ ನಿರೀಕ್ಷೆಯಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಗಿರಿಸಾಲೆಯ ಹೊಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಈಗಾಗಲೇ ಬುಕ್ಕಿಂಗ್ ಮಾಡಿರುವ ಪ್ರವಾಸಿಗರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.

ಉರುಸ್ ಹಬ್ಬಕ್ಕೆ ಆಗಮಿಸುವ ಭಕ್ತಾದಿಗಳ ಭಾರೀ ವಾಹನಗಳ ಸಂಚಾರವನ್ನು ಕೂಡ ನಿರ್ಬಂಧಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.