ಚಿಕ್ಕಮಗಳೂರು : ಕಳಸದಲ್ಲಿ ಕಾಡ್ಗಿಚ್ಚಿಗೆ ಸುಟ್ಟು ಕರಕಲಾದ ಅರಣ್ಯ..!

ಚಿಕ್ಕಮಗಳೂರು : ಕಳಸದಲ್ಲಿ ಕಾಡ್ಗಿಚ್ಚಿಗೆ ಸುಟ್ಟು ಕರಕಲಾದ ಅರಣ್ಯ..!
Facebook
Twitter
LinkedIn
WhatsApp

ಕಳಸ ತಾಲೂಕಿನ ಆನೆಗುಡ್ಡ ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚಿನ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆ‌ಯಾಗಿದ್ದು ಹತ್ತಾರು ಎಕರೆ ಅರಣ್ಯ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದ ಪರಿಣಾಮ ಬೆಂಕಿ ನಂದಿಸಲು ಅಧಿಕಾರಿಗಳ ಹರಸಾಹಸ ಪಡುತ್ತಿದ್ದಾರೆ.

ಗುಡ್ಡದ ಒಂದು ಭಾಗ ಹಸರಿನಿಂದ ಕೂಡಿದ್ದು, ಮತ್ತೊಂದು ಭಾಗ ಸಂಪೂರ್ಣ ಒಣಗಿ ನಿಂತಿದೆ ಪ್ರವಾಸಿಗರು, ಜನರೇ ಹೋಗದ ಜಾಗದಲ್ಲಿ ಹೇಗೆ ಬೆಂಕಿ ಹತ್ತಿದೆ ಅನ್ನೋ ಅನುಮಾನ ವ್ಯಕ್ತವಾಗಿದೆ. ಬಿಸಿಲ ಧಗೆಗೆ ಬೆಂಕಿ ಹೊತ್ತಿರಬಹುದೆಂಬ ಶಂಕೆ ಮೂಡಿದೆ.