ಬೆಂಗಳೂರು: ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಟಸ್ಥ ಎಂದು ಹೇಳಿಕೊಳ್ಳುವ ನಾಯಕರು ಮೊದಲಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದು . ಪಕ್ಷಕ್ಕೆ ಯಡಿಯೂರಪ್ಪರವರ ಕೊಡುಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವ ಕ್ಷಣದಲ್ಲಾದರೂ ಆಗಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಅನುಭವದ ಕೊರತೆ ಇದೆ ಎಂಬ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿ ರಾಜ್ಯಾಧ್ಯಕ್ಷನಾಗಿ ಅನುಭವ ಕಡಿಮೆಯಿರಬಹುದು. ಪಕ್ಷದ ಕಾರ್ಯಕರ್ತನಾಗಿ ಹೆಚ್ಚು ಅನುಭವವಿದೆ ಎಂದು ತಿಳಿಸಿದ್ದಾರೆ.