ಶಾಸಕ‌ ಬಿವೈ ವಿಜಯೇಂದ್ರ ಸಂಧಾನಕ್ಕೂ ಜಗ್ಗದ ರೈತರು ಮುಂದುವರಿದ ಅಹೋರಾತ್ರಿ ಧರಣಿ..!

ಶಾಸಕ‌ ಬಿವೈ ವಿಜಯೇಂದ್ರ ಸಂಧಾನಕ್ಕೂ ಜಗ್ಗದ ರೈತರು ಮುಂದುವರಿದ ಅಹೋರಾತ್ರಿ ಧರಣಿ..!
Facebook
Twitter
LinkedIn
WhatsApp

ಶಿಕಾರಿಪುರ: ತಾಲೂಕಿಮ ಈಸೂರಿನಿಂದ -ಅಂಜನಾಪುರ ವರೆಗೆ ಕೆಇಬಿ 11 ಕೆವಿ ಗ್ರೀಡ್ ನೀಲನಕ್ಷೆ ವಿದ್ಯುತ್ ಮಾರ್ಗ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು ಸೋಮವಾರ ಬೆಳಗ್ಗೆಯಿಂದಲೇ ಆರಂಭವಾದ ಪ್ರತಿಭಟನೆ ಅಹೋರಾತ್ರಿ ಭಜನೆ ಮಾಡಲುವ ಮೂಲಕ‌ ಚಳಿಯನ್ನು ಲೆಕ್ಕಿಸದೇ ರೈತರು ಪ್ರತಿಭಟನೆ ಧರಣಿ ಮುಂದುವರಿಸಿದ್ದಾರೆ.

ಶಾಸಕ ಬಿವೈ ವಿಜಯೇಂದ್ರ ಮನವೋಲಿಕೆ ವಿಫಲ:
ಶಾಸಕ ಬಿವೈ ವಿಜಯೇಂದ್ರ ಸಂಜೆ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು ರೈತರು ನಮ್ಮ ಬೇಡಿಕೆ ಈಡೇರಿಸುವ ವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ‌ ಎಂದು ಹೋರಾಟ ಮುಂದುವರಿಸಿದ್ದಾರೆ.

ಸುದ್ದಿ ಮತ್ತು ಜಾಹೀರಾತಿಗಾಗಿ-7411515737