ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಲೋಕೋಪಯೋಗಿ ಇಲಾಖೆ ವತಿಯಿಂದ ನಗರದ ಅಲ್ಲಮಪ್ರಭು ಉದ್ಯಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಲ್ಲಮ ಪ್ರಭು(ಫ್ರೀಡಂ ಪಾರ್ಕ್)ಉದ್ಯಾನದ ಸರ್ವಾಂಗೀಣ ಅಭಿವೃದ್ದಿ ಕಾಮಗಾರಿಯ(ರೂ.5 ಕೋಟಿ ಮೊತ್ತ) ಶಂಕುಸ್ಥಾಪನಾ ಕಾರ್ಯಕ್ರಮ ನೆರವೇರಿಸಿದರು.
ಕ್ರಾಫ್ಟ್ ಆಫ್ ಮಲೆನಾಡು ಮತ್ತು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ, ಕರಕುಶಲ ಉತ್ಪನ್ನಗಳನ್ನು ಖರೀದಿಸಿ, ಕುಶಲಕರ್ಮಿಗಳನ್ನು ಉತ್ತೇಜಿಸಿದರು. ಹಾಗೂ ತಿಂಡಿ ತಿನಿಸು ಮಳಿಗೆಯಲ್ಲಿ ತಿನಿಸುಗಳನ್ನು ಸವಿದರು.
ಈ ವೇಳೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತ್ಯುತ್ತಮ ಕುಶಲಕರ್ಮಿಗಳು ಇದ್ದು, ಅಚ್ಚುಕಟ್ಟಾಗಿ ಕರಕುಶಲ ಹಾಗೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಜಿಲ್ಲೆಯ ಕುಶಲಕರ್ಮಿಗಳು ವಿಶೇಷವಾಗಿ ಮಹಿಳೆಯರು ತಯಾರಿಸಿದ ಉತ್ಪನ್ಮಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೂ ನೀಡಿ, ಅವರ ಗಮನ ಸೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಶಾಶ್ವತ ಮಳಿಗೆ ತೆರೆಯುವ ಆಲೋಚನೆ ಸಹ ಇದೆ. ಇದರಿಂದ ಸ್ಥಳೀಯ ಕಲಾವಿದರು, ಕುಶಲಕರ್ಮಿಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದೆ ಎಂದರು.
ಸುದ್ದಿ ಮತ್ತು ಜಾಹೀರಾತಿಗಾಗಿ -7411515737