ಶಿವಮೊಗ್ಗದ ಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪಕ್ಷದಲ್ಲಿನ ಆಂತರಿಕ ಗೊಂದಲಗಳು ತನಗೆ ಖುಷಿ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರುವ ಮೊದಲೇ ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳು ಬಗೆಹರಿಯಬೇಕು. ನಾನೂ ಸಹ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇನೆ. ಈ ಅಹಿತ ಬೆಳವಣಿಗೆಗಳು ನನಗೂ ಸಂತೋಷ ತಂದಿಲ್ಲ. ಕಾರ್ಯಕರ್ತರಲ್ಲೂ ಸಹ ಬೇಸರದಿಂದಿದ್ದಾರೆ. ಕೇಂದ್ರ ನಾಯಕರ ಮೇಲೆ ನನಗೆ ವಿಶ್ವಾಸವಿದೆ.
ವಿಶೇಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಅಪಮಾನ ಮಾಡುವ ರೀತಿ ಕಳೆದ ಎರಡು ವರ್ಷದಿಂದ ಕೆಲವು ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾರ್ಯಕರ್ತರು ಸಾಕಷ್ಟು ನೊಂದಿದ್ದಾರೆ. ಈ ವಿಚಾರಗಳನ್ನ ನಾನು ಪುನಃ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ. ಎಂಭತ್ತರಷ್ಟು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ನನ್ನ ಪರ ಇದ್ದಾರೆ. ಉಳಿದವರೂ ಸಹ ಪಕ್ಷದ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ವಿನಃ ನನ್ನ ಅಧ್ಯಕ್ಷಗಾದಿ ಬಗ್ಗೆ ಅಲ್ಲ ಎಂದರು.
ಪಕ್ಷದ ಮೇಲೆ ಬಿಜೆಪಿ ನಾಯಕ ಶ್ರೀರಾಮುಲು ಬೇಸರ ಸರಿ ಅಲ್ಲ. ಕೋರ್ ಕಮಿಟಿಯಲ್ಲಿ ರಾಧಾ ಮೋಹನ್ ಜೊತೆ ಕೆಲವು ಚರ್ಚೆ ಆಗಿದೆ. ಶ್ರೀರಾಮುಲು ನಮ್ಮ ಹಿರಿಯ ನಾಯಕರು. ಅವರ ಮೇಲೆ ನನಗೆ ಅಪಾರ ಗೌರವವಿದೆ. ಸಭೆಯೊಳಗೆ ನಡೆದ ಚರ್ಚೆ ಹೊರಗೆ ಬರಬಾರದು. ಬಹಿರಂಗ ಪಡಿಸಬಾರದು. ಸಂಘಟನೆ ದೃಷ್ಟಿಯಿಂದ ಸಾಕಷ್ಟು ಚರ್ಚೆ ಆಗಿದೆ ಎಂದರು.
ಮಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ವರದಿ ಕ್ರೆಡಿಬಲ್ ಇರುತ್ತೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಕ್ಲೀನ್ ಚಿಟ್ ಪಡೆವ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.