ಶಿವಮೊಗ್ಗ,07 ( ಕರ್ನಾಟಕ ವಾರ್ತೆ) ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ಕ್ರೀಡಾಶಾಲೆ / ಕ್ರೀಡಾನಿಲಯಗಳ ಪ್ರವೇಶಕ್ಕೆ ವಿವಿಧ ಮಟ್ಟದಲ್ಲಿ ಆಯ್ಕೆ ನಡೆಸಲಾಗುವುದು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಆಯ್ಕೆ ಮಾಡಲಾಗುವುದು. ದಿ: 20-01-2025 ರಂದು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸ.ಪ.ಪೂ ಕಾಲೇಜು, ತೀರ್ಥಹಳ್ಳಿ. ದಿ: 21-01-2025 ಸಾಗರ ತಾಲ್ಲೂಕಿನಲ್ಲಿ ಸಾಗರ ತಾಲ್ಲೂಕು ಕ್ರೀಡಾಂಗಣ. ದಿ: 23-01-2025 ಹೊಸನಗರ ತಾಲ್ಲೂಕಿನಲ್ಲಿ ಹೊಸನಗರ ತಾಲ್ಲೂಕು ಕ್ರೀಡಾಂಗಣ. ದಿ: 24-01-2025 ಸೊರಬ ತಾಲ್ಲೂಕಿನಲ್ಲಿ ಸ.ಪ.ಪೂ ಕಾಲೇಜು ಆನವಟ್ಟಿ. ದಿ: 27-01-2025 ರಂದು ಶಿಕಾರಿಪುರ ತಾಲ್ಲೂಕಿನಲ್ಲಿ ಶಿಕಾರಿಪುರ ತಾಲ್ಲೂಕು ಕ್ರೀಡಾಂಗಣ. ದಿ: 29-01-2025 ರಂದು ಭದ್ರಾವತಿ ತಾಲ್ಲೂಕಿನಲ್ಲಿ ಕನಕ ಮಂಟಪ ಮೈದಾನ. ದಿ: 30-01-2025 ರಂದು ಶಿವಮೊಗ್ಗ ತಾಲ್ಲೂಕಿನಲ್ಲಿ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಆಯಾ ತಾಲ್ಲೂಕಿನ ಬಾಲಕ ಬಾಲಕಿಯರು ನಿಬಂಧನೆಗಳೊಪಟ್ಟು ಆಯ್ಕೆಯಲ್ಲಿ ಭಾಗವಹಿಸಬಹುದು.
ಕಿರಿಯ ವಿಭಾಗದ ಕ್ರೀಡಾ ವಸತಿ ಶಾಲೆಗಳಿಗೆ ಬಾಲಕ/ಬಾಲಕಿಯರಿಗೆ ಆಯ್ಕೆಯನ್ನು ಫೆ.6 ರಂದು ನಡೆಸಲಾಗುವುದು. ಈ ವಿಭಾಗದ ರಾಜ್ಯ ಮಟ್ಟದ ಆಯ್ಕೆಯನ್ನು ನೆಹರು ಕ್ರೀಡಾಂಗಣದಲ್ಲಿ ನಡೆಸಲಿದ್ದು, ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಬೇಕು. ಅಥ್ಲೆಟಿಕ್ಸ್, ಕುಸ್ತಿ, ಹಾಕಿ, ಬ್ಯಾಸ್ಕೆಟ್‌ಬಾಲ್, ಜಿಮ್ನಾಸ್ಟಿಕ್, ವಾಲಿಬಾಲ್, ಫುಟ್‌ಬಾಲ್, ಸೈಕ್ಲಿಂಗ್, ಜುಡೋ ಕ್ರೀಡೆಗಳು ಇದ್ದು, 2025 ರ ಜೂನ್ 1 ರಂದು 14 ವರ್ಷದೊಳಗಿರಬೇಕು. 8 ನೇ ತರಗತಿ ಸೇರಲು ಅರ್ಹತೆ ಹೊಂದಿರುವವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ಹಿರಿಯ ವಿಭಾಗದ ಕ್ರೀಡಾ ವಸತಿ ಯುವಕ/ಯುವತಿಯರಿಗೆ ಫೆ.7 ರಂದು ಆಯ್ಕೆ ನಡೆಸಲಾಗುವುದು. ಈ ವಿಭಾಗದ ರಾಜ್ಯ ಮಟದ್ಟ ಆಯ್ಕೆಯನ್ನು ನೆಹರು ಕ್ರೀಡಾಂಗಣದಲ್ಲಿ ನಡೆಸಲಿದ್ದು, ಬೆ. 9 ಗಂಟೆಗೆ ವರದಿ ಮಾಡಿಕೊಳ್ಳಬೇಕು. ಹಿರಿಯ ವಿಭಾಗದ ಆಯ್ಕೆಯು ನೇರವಾಗಿ ರಾಜ್ಯ ಮಟ್ಟದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ನಿಗದಿತ ಅರ್ಜಿ ನಮೂನೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಛೇರಿಯಿಂದ ಪಡೆದು ಭರ್ತಿ ಮಾಡಿ ಫೆ.5 ರೊಳಗೆ ಕಛೇರಿಗೆ ಸಲ್ಲಿಸಬೇಕು. ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಜುಡೋ, ವಾಲಿಬಾಲ್, ಹಾಕಿ, ಫುಟ್‌ಬಾಲ್, ಕುಸ್ತಿ ಕ್ರೀಡೆಗಳು ಇದ್ದು, 2025 ಜೂನ್ 1 ರಂದು 18 ವರ್ಷದೊಳಗಿನ ಪ್ರಥಮ ಪಿಯುಸಿಗೆ ಸೇರಲು ಅರ್ಹತೆ ಹೊಂದಿರುವವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.
ಕ್ರೀಡಾಶಾಲೆ/ ಕ್ರೀಡಾ ನಿಲಯ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣ ಪತ್ರ, ತರಗತಿ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ತರಬೇಕು. ಮೇಲ್ಕಂಡ ಕೇಂದ್ರಗಳಲ್ಲಿ ಆಯ್ಕೆಗೆ ಭಾಗವಹಿಸಲು ಸಾಧ್ಯವಾಗದೇ ಇದ್ದವರು, ಜ.30 ರಂದು ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿರುವ ಆಯ್ಕೆಯಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಬಾಳಪ್ಪ ಮಾನೆ ಮೊ;9880653266, ರಾಜಪ್ಪ ಫಳಕೆ ಮೊ; 9902851909 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.