ಪ್ರಸಿದ್ಧ ರಿಯಲ್ ಮಿ ಕಂಪನಿಯ ಬಹುನಿರೀಕ್ಷಿತ ರಿಯಲ್ ಮಿ 14 Pro ಸರಣಿಯು ಅಂತಿಮವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ಎರಡು ಮಾದರಿಗಳನ್ನು ಒಳಗೊಂಡಿದೆ: ರಿಯಲ್ ಮಿ 14 Pro ಮತ್ತು ರಿಯಲ್ ಮಿ 14 Pro+. ಈ ಫೋನ್‌ಗಳ ಪ್ರಮುಖ ಹೈಲೇಟ್ ಎಂದರೆ ಇದರಲ್ಲಿ ಬಣ್ಣ-ಬದಲಾಯಿಸುವ ತಂತ್ರಜ್ಞಾನ ನೀಡಲಾಗಿದೆ. ಅಂದರೆ ಈ ಫೋನಿನ ಪರ್ಲ್ ವೈಟ್ ರೂಪಾಂತರದಲ್ಲಿ ಕೋಲ್ಡ್ ಸೆನ್ಸಿಟಿವ್ ಬಣ್ಣ-ಬದಲಾವಣೆ ತಂತ್ರಜ್ಞಾನವನ್ನು ಬಳಸಿದೆ.
![](https://shikarinews.com/wp-content/uploads/2025/01/images-14-1.jpeg)
ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾದಾಗ, ಫೋನ್‌ನ ಹಿಂಭಾಗದ ಕವರ್ ಪರ್ಲ್ ವೈಟ್‌ನಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ. ತಾಪಮಾನವು ಹೆಚ್ಚಾದಾಗ ಹಿಂಭಾಗದ ಕವರ್ ಅದರ ಮೂಲ ಬಣ್ಣಕ್ಕೆ ಮರಳುತ್ತದೆ. ವಿನ್ಯಾಸದ ಜೊತೆಗೆ, ರಿಯಲ್ ಮಿ 14 Pro ಸರಣಿಯು ಕ್ಯಾಮೆರಾ, ಬ್ಯಾಟರಿ ಮತ್ತು ಕಾರ್ಯಕ್ಷಮತೆಯು ಅದ್ಭುತವಾಗಿದೆ. ರಿಯಲ್ ಮಿ 14 Pro ಬೆಲೆ 8GB + 128GB ಮಾದರಿಗೆ 24,999 ರೂ. ಗಳಿಂದ ಪ್ರಾರಂಭವಾಗುತ್ತದೆ. ರಿಯಲ್ ಮಿ 14 Pro+ 256GB ಮಾದರಿಗೆ 29,999 ರೂ. ಗಳಿಂದ ಪ್ರಾರಂಭವಾಗುತ್ತದೆ. ರಿಯಲ್ ಮಿ 14 Pro+ ನಲ್ಲಿ ಬ್ಯಾಂಕ್ ಕೊಡುಗೆಯ ಮೂಲಕ Rs 4,000 ವರೆಗೆ ರಿಯಾಯಿತಿ ಮತ್ತು ರಿಯಲ್ ಮಿ 14 Pro ನಲ್ಲಿ Rs 2,000 ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. 14 Pro ರೂಪಾಂತರಗಳು ಜನವರಿ 23 ರಿಂದ 12 PM IST ಕ್ಕೆ ಫ್ಲಿಪ್‌ಕಾರ್ಟ್, ರಿಯಲ್ ಮಿ ವೆಬ್‌ಸೈಟ್, ರಿಟೇಲ್ ಸ್ಟೋರ್‌ಗಳ ಮೂಲಕ ಮಾರಾಟವಾಗಲಿದೆ.