ಮಹಾಕುಂಭ ಮೇಳೆ ಮಹತ್ವ ಆಚರಣೆ ಹಿನ್ನಲೇ ಏನು..? ಇಲ್ಲಿದೆ ಮಾಹಿತಿ..!

ಮಹಾಕುಂಭ ಮೇಳೆ ಮಹತ್ವ ಆಚರಣೆ ಹಿನ್ನಲೇ ಏನು..? ಇಲ್ಲಿದೆ ಮಾಹಿತಿ..!
Facebook
Twitter
LinkedIn
WhatsApp

ಉತ್ತರ ಪ್ರದೇಶ: ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ 2025 ಆರಂಭವಾಗಿದ್ದು. ಜ. 13ರಿಂದ ಫೆಬ್ರುವರಿ 26 ರವರೆಗೆ ನಡೆಯಲಿರುವ ಈ ಮಹಾಕುಂಭಮೇಳ ಸುಮಾರು ಕೋಟಿಗೂ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಮಹಾ ಕುಂಭಮೇಳ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು ಅಪಾರವಾದ ನಂಬಿಕೆ, ಶ್ರದ್ಧೆಯು ಮಹಾ ಕುಂಭಮೇಳದಲ್ಲಿ ಅಡಗಿದೆ. ಉತ್ತರ ಪ್ರದೇಶ ಸರ್ಕಾರ ಮಹಾ ಕುಂಭಮೇಳಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದೆ‌.

ಕುಂಭಮೇಳ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ. ಈಗ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಮಹಾ ಕುಂಭಮೇಳ ಬಹಳ ವಿಶೇಷವಾಗಿದ್ದು, 114 ವರ್ಷಗಳ ಬಳಿಕ ಈ ಮಹಾ ಕುಂಭಮೇಳ ನಡೆಯುತ್ತಿದೆ.

ವೇದ ಮತ್ತು ಪುರಾಣಗಳಲ್ಲಿ ಮಹಾ ಕುಂಭಮೇಳದ ಬಗ್ಗೆ ಉಲ್ಲೇಖವಿದೆ. ಎರಡು ಶತಮಾನಗಳ ಹಿಂದೆ ಭೂಮಿಯ ಮೇಲೆ ಅಪಾರ ಜನರು ಸೇರುವ ಮಹತ್ವದ ಧಾರ್ಮಿಕ ಉತ್ಸವ ಮಹಾ ಕುಂಭಮೇಳ ಎಂದು ಉಲ್ಲೇಖಿಸಲಾಗಿದೆ. ಅರ್ಧ ಕುಂಬಮೇಳ, ಕುಂಭಮೇಳ, ಮಹಾ ಕುಂಭಮೇಳ ಕೇವಲ ನಾಲ್ಕು ನಗರದಲ್ಲಿ ಮಾತ್ರ ಏಕೆ ನಡೆಯುತ್ತದೆ ಎನ್ನುವುದಕ್ಕೂ ಐತಿಹಾಸಿಕ ಮಹತ್ವವಿದೆ.

ಮಹಾ ಕುಂಭಮೇಳದ ಇತಿಹಾಸ ಪುರಾಣಗಳ ಪ್ರಕಾರ ಮಹಾ ಕುಂಭಮೇಳದ ಸಂದರ್ಭದಲ್ಲಿ ದೇವತೆಗಳು ಭೂಮಿಗೆ ಆಗಮಿಸಿ ಭಕ್ತರನ್ನು ಆಶೀರ್ವದಿಸುತ್ತಾರೆ. ಸಮುದ್ರ ಮಂಥನಕ್ಕೆ ಸಹ ಮಹಾ ಕುಂಭಮೇಳದ ಸಬಂಧವಿದೆ ಎಂದು ಹಲವಾರು ಉಲ್ಲೇಖಗಳು ಹೇಳುತ್ತವೆ.

ಕುಂಭ ಎಂದರೆ ಕಲಶ. ಸಮುದ್ರ ಮಂಥನದ ಸಮಯದಲ್ಲಿ ಮಹಾವಿಷ್ಣು ಮೋಹಿನಿಯ ವೇಷದಲ್ಲಿ ಸಾಗುವಾಗ ಅಮೃತದ ಪಾತ್ರೆಯಿಂದ ಅಮೃತದ ನಾಲ್ಕು ಹನಿಗಳು ಪ್ರಯಾಗ್‌ರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜೈನಿಯಲ್ಲಿ ಬಿದ್ದಿತ್ತು. ಆದ್ದರಿಂದ ಈ ನಾಲ್ಕು ಸ್ಥಳಗಳನ್ನು ಪವಿತ್ರ ತೀರ್ಥ ಸ್ಥಳಗಳು, ಇಲ್ಲಿ ಹರಿಯುವ ನದಿಗಳಲ್ಲಿ ತೀರ್ಥಸ್ನಾನ ಮಾಡಿದರೆ ಮೋಕ್ಷ ಸಿಗುತ್ತದೆ ಎಂಬುದು ನಂಬಿಕೆಯಾಗಿದೆ.

ನಾಲ್ಕು ನದಿಗಳ ತೀರದಲ್ಲಿ ಕುಂಭಮೇಳ, ಮಹಾ ಕುಂಭಮೇಳ ನಡೆಯುತ್ತದೆ. ಹರಿದ್ವಾರದಲ್ಲಿ ಗಂಗಾ, ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮ, ಉಜೈನಿಯಲ್ಲಿ ಕ್ಷಿಪ್ರಾ ಮತ್ತು ನಾಸಿಕ್ ತ್ರ್ಯಂಬಕೇಶ್ವರದಲ್ಲಿ ಗೋದಾವರಿ ನದಿಗಳ ತಟದಲ್ಲಿ ಇದು ನಡೆಯುತ್ತದೆ. ಕುಂಭಮೇಳದ ಸಮಯದಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪ ತೊಳೆದು ಹೋಗುತ್ತವೆ ಮತ್ತು ಪುಣ್ಯಸಿಗುತ್ತದೆ ಎಂಬ ನಂಬಿಕೆ ಇದೆ.