ಚಿಕ್ಕಮಗಳೂರು ಇಬ್ಬರ ಮೇಲೆ ಚಿರತೆ ದಾಳಿ…!

ಚಿಕ್ಕಮಗಳೂರು ಇಬ್ಬರ ಮೇಲೆ ಚಿರತೆ ದಾಳಿ…!
Facebook
Twitter
LinkedIn
WhatsApp

ಚಿಕ್ಕಮಗಳೂರು: ಇಬ್ಬರು ದಾರಿಹೊಕ್ಕರ ಮೇಲೆ ಚಿರತೆ ದಾಳಿ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಎಮ್ಮೆದೊಡ್ಡಿ ಗ್ರಾಮದ ಮೂರ್ತಣ್ಣ ಹಾಗೂ ಮಂಜಣ್ಣ ಎಂಬುವರು ಬೆಳಗ್ಗೆ ಸಖರಾಯಪಟ್ಟಣಕ್ಕೆ ಬರುವಾಗ ರಸ್ತೆ ಮಧ್ಯೆ ಚಿರತೆ ದಾಳಿ ಮಾಡಿದೆ. ಮೂರ್ತಣ್ಣ ಎಂಬುವರ ಎಡಗೈನ ಒಂದು ಬೆರಳನ್ನ ಚಿರತೆ ತಿಂದಿದ್ದು ಮಂಜಣ್ಣ ಎಂಬುವರ ಎಡಗೈಗೂ ಗಂಭೀರ ಗಾಯವಾಗಿದೆ.

ಚಿರತೆ ಮತ್ತೊಬ್ಬರ ಮೇಲೆ ದಾಳಿಗೆ ಯತ್ನಿಸುತ್ತಿದ್ದಂತೆ ಸ್ಥಳೀಯರು ಕೂಗುತ್ತಿದ್ದಂತೆ ಚಿರತೆ ಓಡಿಹೋಗಿದೆ. ಸ್ಥಳೀಯರು ಚಿರತೆಯನ್ನ ಕಲ್ಲಿನಿಂದ ಹೊಡೆದು ಓಡಿಸಿದ್ದಾರೆ.

ಎಮ್ಮೆದೊಡ್ಡಿ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಇರುವ ಚಿರತೆ ರಸ್ತೆಯಲ್ಲಿ ಕಾಣುತ್ತಿರುವವರ ಮೇಲೆ ದಾಳಿಗೆ ಮುಂದಾಗುತ್ತಿದೆ. ಚಿರತೆ ದಾಳಿ ವಿಷಯ ತಿಳಿಯುತ್ತಿದ್ದಂತೆ ನೂರಾರು ಜನ ಮದಗದ ಕೆರೆ ಏರಿ ಮೇಲೆ ಸೇರಿದ್ದಾರೆ.ಅಲ್ಲಿಗೂ ಬಂದಂತ ಚಿರತೆ ಮತ್ತೊಬ್ಬರ ಮೇಲೆ ದಾಳಿಗೆ ಯತ್ನಿಸಿದೆ.

ನೂರಾರು ಜನ ಕಲ್ಲಿನಿಂದ ಹೊಡೆದು ಚಿರತೆಯನ್ನು ಓಡಿಸಿದ್ದಾರೆ. ಆದರೆ ಜನ ರಸ್ತೆಯಲ್ಲಿ ಹೋರಾಡಲು ಹಿಂದೇಟು ಹಾಕುತ್ತಿದ್ದಾರೆ. ಕೊಡಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸೆರೆಹಿಡಿದು, ಸ್ಥಳಾಂತರ ಮಾಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.