ಕೊಟ್ಟಿಗೆಹಾರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ದೇವನಗೂಲ್ ಗ್ರಾಮದ ಬಳಿ ನಡೆದಿದೆ. ಬಸ್ಸಿನಲ್ಲಿದ್ದ 25ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಕಾಫಿನಾಡ ನಿರಂತರ ಮಳೆಯಿಂದ ಮಲೆನಾಡ ಸೌಂದರ್ಯ ಇಮ್ಮಡಿಕೊಂಡಿದ್ದು ನಿತ್ಯ ಸಾವಿರಾರು ಪ್ರವಾಸಿಗರು ಜಿಲ್ಲೆಯ ನಾನಾ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಕೂಡ ಕಳಸ ತಾಲೂಕಿನ ಕುದುರೆಮುಖದ ನೇತ್ರಾವತಿ ಪೀಕ್ ಗೆ ಟ್ರಕ್ಕಿಂಗ್ ಗೆಂದು ಬರುತ್ತಿದ್ದ ಬೆಂಗಳೂರು ಮೂಲದ ಖಾಸಗಿ ಬಸ್ ಮಳೆ-ಮಂಜುವಿನ ಕಾರಣದಿಂದಾಗಿ ತಿರುವಿನಲ್ಲಿ ಬಸ್ಸು ತಾಲೂಕಿನ ನಿಯಂತ್ರಣ ಪಲ್ಟಿಯಾಗಿದೆ.
ಕೂಡಲೇ ಸ್ಥಳೀಯರು ಬಸ್ಸಿನಲ್ಲಿ ಇದ್ದವರನ್ನು ರಕ್ಷಿಸಿದ್ದಾರೆ. 26ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರಗೊಂಡಿದೆ. ಬಸ್ಸಿನಲ್ಲಿದ್ದವರು ಬೆಂಗಳೂರಿನ ಎಂ.ಎನ್.ಸಿ. ಕಂಪನಿಯಲ್ಲಿ ಕೆಲಸ ಮಾಡುವ ಯುವಕ-ಯುವತಿಯರು.
ವೀಕ್ ಎಂಡ್ ಹಿನ್ನೆಲೆ ಟ್ರಕ್ಕಿಂಗ್ ಗೆ ಎಂದು ಬರುವಾಗ ಈ ದುರ್ಘಟನೆ ಸಂಭವಿಸದೆ. ಗಾಯಾಳುಗಳನ್ನ ಸ್ಥಳಿಯ ಯುವಕರು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.