ವಸತಿ ಶಾಲೆ ವಿದ್ಯಾರ್ಥಿಗಳಿಗೆ ಇನ್ಸ್‌ಪೈಯರ್ ವಿಡಿಯೋ ಸಂವಾದ ಕಾರ್ಯಕ್ರಮ

ವಸತಿ ಶಾಲೆ ವಿದ್ಯಾರ್ಥಿಗಳಿಗೆ ಇನ್ಸ್‌ಪೈಯರ್ ವಿಡಿಯೋ ಸಂವಾದ ಕಾರ್ಯಕ್ರಮ
Facebook
Twitter
LinkedIn
WhatsApp

ಶಿವಮೊಗ್ಗ: ಇನ್ಸ್‌ಪೈಯರ್ ಎಂಬ ಕಾರ್ಯಕ್ರಮದಲ್ಲಿ ಇನ್ಪ್ಸರ್ ಇಗ್ನಿಟ್ ಮೈಂಡ್ಸ್ ಇಗ್ನಿಟ್ ಪಾಸಿಟಿವಿಟಿ” ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತ ಮತ್ತು ನಾಲ್ಕು ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ನಡೆದ ಶಿವಮೊಗ್ಗ ಜಿಲ್ಲೆಯ 32 ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು 259 ವಿದ್ಯಾರ್ಥಿ ನಿಲಯಗಳ 6ನೇ ತರಗತಿಯಿಂದ ಇಂಜಿನಿಯರಿಂಗ್ ಓದುತ್ತಿರುವ ಸುಮಾರು 12-13 ಸಾವಿರ ವಿದ್ಯಾರ್ಥಿಗಳೊಂದಿಗೆ ವಿಶೇಷವಾದ ಇನ್ಸ್‌ಪೈಯರ್ (Inspire) ಎಂಬ ವೀಡಿಯೋ ಸಂವಾದ ಕಾರ್ಯಕ್ರಮ ನಡೆಸಲಾಯಿತು.

ಈ ವೇಳೆ ವಿಧಾನ ಪರಿಷತ್ ಸದಸ್ಯರು ಹಾಗೂ ಮಕ್ಕಳ ತಜ್ಞರಾದ ಡಾ.ದನಂಜಯ ಸರ್ಜಿರವರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕಲಿಕೆಯ ವಿಧಾನ, ಶಿಸ್ತು ಪಾಲನೆ, ಸಮಯ ಪರಿಪಾಲನೆ, ವೈಯಕ್ತಿಕ ಶುಚಿತ್ವ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು, ರಕ್ತದ ಒತ್ತಡ (ಬಿ.ಪಿ.), ಹೃದಯಾಘಾತವನ್ನು ತಡೆಯುವ ಕ್ರಮಗಳು, ಯೋಗನಿದ್ರೆ ಹಾಗೂ ಪ್ರತೀ ದಿನ ಕನಿಷ್ಟ 1 ರಿಂದ 2 ಗಂಟೆಗಳ ಪಠ್ಯತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದಾಗುವ ಉಪಯೋಗ ಮತ್ತು ಇತರೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ಈ ವಿಶೇಷವಾದ ಇನ್ಸ್‌ಪೈಯರ್ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಎನ್ ಹೇಮಂತ್, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಶಿವಮೊಗ್ಗ, ಶ್ರೀನಿವಾಸ ಎಸ್. ಜಿ., ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಲ್ಲೇಶಪ್ಪ, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶ್ರೀಮತಿ ಶೋಭಾ, ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಶ್ರೀಮತಿ ಪ್ರೀತಿ, ಜಿಲ್ಲಾ ಅಧಿಕಾರಿಗಳು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳು ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಡಲಾಯಿತು.

News By: Raghu Shiakri-7411515737