ಶಿಕಾರಿಪುರ ಆಧಾರ್ ಕಾರ್ಡ್ ನೋಂದಣಿ ತಿದ್ದುಪಡಿಗೆ ಜನರ ಪರದಾಟ: ಕಾಂಗ್ರೆಸ್ ಮನವಿ

ಶಿಕಾರಿಪುರ ಆಧಾರ್ ಕಾರ್ಡ್ ನೋಂದಣಿ ತಿದ್ದುಪಡಿಗೆ ಜನರ ಪರದಾಟ: ಕಾಂಗ್ರೆಸ್ ಮನವಿ
Facebook
Twitter
LinkedIn
WhatsApp

ಶಿಕಾರಿಪುರ ತಾಲೂಕಿನಲ್ಲಿ ಆಧಾರ್ ನೋಂದಣಿ ಕೇಂದ್ರಗಳ ಕೊರತೆಯಿಂದ ಪೋಸ್ಟ್ ಆಫೀಸ್ ಹಾಗೂ ಇನ್ನಿತರ ಕೇಂದ್ರಗಳಲ್ಲಿ ಜನರು ಮುಂಜಾನೆ 4 ಗಂಟೆಗೆ ಕಛೇರಿ ಬಾಗಿಲು ಕಾಯುವಂತಾಗಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ತಾಲೂಕ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮಾತನಾಡಿ
ತಾಲೂಕಿನಲ್ಲಿ ಹೊಸ ಆಧಾರ್ ಕಾರ್ಡ್ ಮಾಡುವ ಮತ್ತು ತಿದ್ದುಪಡಿ ಮಾಡುವ ಕೇಂದ್ರಗಳು ಸರಿಯಾಗಿ ಕೆಲಸ ಮಾಡದೆ ಇರುವ ಪರಿಣಾಮ ವಿದ್ಯಾರ್ಥಿಗಳು ನಾಗರಿಕರು ಬೆಳಗ್ಗೆ 4 ಗಂಟೆಗೆ ಬಂದು ಕ್ಯೂನಲ್ಲಿ ನಿಂತು ಕೆಲಸವಾಗದೆ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ಇಂದು ಶಿಕಾರಿಪುರ ತಾಲೂಕು ಯುವ ಕಾಂಗ್ರೆಸ್ ಸಮಿತಿ ಹಾಗೂ NSUI ಘಟಕದಿಂದ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದೇವೆ ಶಾಸಕರು ಸಂಸದರು ಈ ಕುರಿತು ಗಮನ ನೀಡಬೇಕು ಗ್ರಾಮೀಣ ಜನರ ಬಡ ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಪ್ರತಿನಿತ್ಯ ಪರದಾಟ ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ NSUI ನಗರ ಅಧ್ಯಕ್ಷರಾದ ಸೈಯದ್ ಹಸೇನ್,
ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜು ನಾಯ್ಕ್, ಬ್ಲಾಕ್ ಉಪಾಧ್ಯಕ್ಷರಾದ ಚರಣ್ ಬನ್ನೂರು, ಸುನಿಲ್,ಯುವ ಕಾಂಗ್ರೆಸ್ ಮುಖಂಡರಾದ ಸದ್ದು ಬಳ್ಳಿಗಾವಿ,ಇದ್ದರು.

News By: Raghu Shikari-7411515737