ಬಿಜೆಪಿ ಕಾರ್ಯಕರ್ತರಿಂದ ಸಚಿವ ಮಧು ಬಂಗಾರಪ್ಪರಿಗೆ ಮುತ್ತಿಗೆ ಹಾಕಲಾಗುವುದು :ಹುಲ್ಮಾರ್ ಮಹೇಶ್

ಬಿಜೆಪಿ ಕಾರ್ಯಕರ್ತರಿಂದ ಸಚಿವ ಮಧು ಬಂಗಾರಪ್ಪರಿಗೆ ಮುತ್ತಿಗೆ ಹಾಕಲಾಗುವುದು :ಹುಲ್ಮಾರ್ ಮಹೇಶ್
Facebook
Twitter
LinkedIn
WhatsApp


ಶಿಕಾರಿಪುರ: ಜಿಲ್ಲಾ‌ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ‌ನವರ ಬಿವೈ ರಾಘವೇಂದ್ರ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ. ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಚಿವ ಮಧು ಬಂಗಾರಪ್ಪ‌ ಅವರಿಗೆ ಬಿಜೆಪಿ ಕಾರ್ಯಕರ್ತರಿಂದ ಘೇರವ್ ಹಾಕಲಾಗುವುದು ಎಂದು ಬಿಜೆಪಿ ಮುಖಂಡ ಮಹೇಶ್ ಹುಲ್ಮಾರ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗಳು ನಷ್ಟವಾಗಿದೆ ರೈತರ ಸಮಸ್ಯೆಗಳ ಬಗ್ಗೆ‌ ಮಾತನಾಡಿ ಅಭಿವೃದ್ಧಿ ಕಡೆಗೆ ಗಮನ‌ ನೀಡಿ ಸಂಸದರು ಸಹಕಾರ ನೀಡುತ್ತಾರೆ ಎಂದರು‌.
ಶಿವಮೊಗ್ಗದಲ್ಲಿ ಸಚಿವರ ಆಪ್ತರಾದ ಜಿ.ಡಿ ಮಂಜುನಾಥ ಎನ್ನುವರು ಗೋಪಾಳದಲ್ಲಿ 2 ಕೋಟಿ ಮನೆ ಕಟ್ಟಿದ್ದಾರೆ ಹಣ ಎಲ್ಲಿಂದ ಬಂತು ಜಿಲ್ಲೆಯಲ್ಲಿ ಅವರ ಮೂಲಕ ಸಚಿವರು ವರ್ಗಾವಣೆ ದಂದೆ ಮಾಡಿಕೊಂಡು ಒಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಂಗದೂರು ಸೇತುವೆ ನಿರ್ಮಾಣದಲ್ಲಿ ಬಿ.ಎಸ್ ಯಡಿಯೂರಪ್ಪನವರ ಸಂಸದ ಬಿವೈ ರಾಘವೇಂದ್ರ ‌ಅವರ ಕೊಡುಗೆ ಅಪಾರವಾಗಿದೆ. ಸಾಗರ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಮಧು ಬಂಗಾರಪ್ಪ ‌ಅವರು ಕಮಿಷನ್ ಸಿಕ್ಕಿಲ ಎಂದು ಸಂಸದರ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ 2 ವರ್ಷದಲ್ಲಿ ಸಚಿವರ ಸಾಧನೆ ಏನೂ ಎಂದು ತಿಳಿಸಲಿ ಅದನ್ನು ಬಿಟ್ಟು ಸಂಸದರ ತೆಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಚಿವರು ರೈತರ ಬಗ್ಗೆ ಕಾಳಜಿ ಇದ್ದರೆ ಬೆಳೆನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಮನಗೌಡ, ರಾಜಪ್ಪ, ರುದ್ರಪ್ಪ ಕಾಳೆನಹಳ್ಳಿ, ಗಂಗಾಧರಪ್ಪ, ರವಿ ಕುಮಾರ್ , ದರ್ಶನ್, ಇದ್ದರು

News By: Raghu Shikari-7411515737