ಡಿಸಿಸಿ ಬ್ಯಾಂಕ್ ನ ನೇಮಕಾತಿಯ ಹಗರಣದ ಕುರಿತು ತನಿಖೆಗೆ ಸರ್ಕಾರ ಅಸ್ತು..!

ಡಿಸಿಸಿ ಬ್ಯಾಂಕ್ ನ ನೇಮಕಾತಿಯ ಹಗರಣದ ಕುರಿತು ತನಿಖೆಗೆ ಸರ್ಕಾರ ಅಸ್ತು..!

ಶಿವಮೊಗ್ಗ: ಆ.04 ರಂದು ಶಿಕ್ಷಣ ಸಚಿವ ಮಧುಬಂಗಾರಪ್ಪ, ಜೂ.1 ರಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅರ್ಜಿ, ಭದ್ರಾವತಿ ಶಾಸಕ ಸಂಗಮೇಶ್ವರ್, ಸರ್ಕಾರದ ಅಧೀನ ಕಾರ್ಯದರ್ಶಿ -3, ಡಿಸಿಸಿ ಬ್ಯಾಂಕ್ ನ ನೌಕರರ ದೂರು, ಅಪರ ನಿಬಂಧಕರ ಕಚೇರಿಯ ಪತ್ರದ ಉಲ್ಲೇಖವಿರುವ ಪತ್ರದ ಆಧಾರದ ಮೇರೆಗೆ ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಹಗರಣ ನಡೆದಿದೆ ತನಿಖೆಗೆ ಒತ್ತಾಯದ ಮೇರೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶಿಸಿದ್ದಾರೆ.

ಹಲವು ದಿನಗಳಿಂದ ಕೇಳಿಸುತ್ತಿದ್ದ ಡಿಸಿಸಿ ಬ್ಯಾಂಕ್ ನ ನೇಮಕಾತಿ ಹಗರಣದ ಬಗ್ಗೆ ಕೊನೆಗೂ ಸರ್ಕಾರ ತನಿಖೆಗೆ ಆದೇಶಿಸಿ, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಆದೇಶದಲ್ಲಿ ಏನಿದೆ ?

ನೇಮಕಾತಿ ಪ್ರಕ್ರಿಯೆಯಲ್ಲಿ 17 ರ ರೀತ್ಯ ನಿಯಮಾನುಸಾರ  ನಡೆಸಲಾಗಿದೆಯೇಎಂದು ಕೂಲಂಕುಷವಾಗಿ ಪರಿಶೀಲಿಸಿ ದೂರು ಸಾಬೀತಾದಲ್ಲಿ ಅಗತ್ಯ ದಾಖಲಾತಿಯೊಂದಿಗೆ ವರದಿಯನ್ನ 15ದಿನಗಳ ಒಳಗೆ ಆಧ್ಯತೆ ಮೇಲೆ ವರದಿ ಮಾಡಲು ಸಹಕಾರ ಸಂಘಗಳ ಉಪನಿಬಂಧಕರಾದ ಶಶಿಧರ್.ಪಿ, ಲೆಕ್ಕ ಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರಾದ ಮಹೇಶ್ವರಪ್ಪನವರಿಗೆ  ಸೂಚಿಸಿ ಇಲಾಖೆಯ ಬೆಂಗಳೂರು ಪ್ರಾಂತ ಆದೇಶಿಸಿದೆ.

6 ದೂರುಗಳ ಉಲ್ಲೇಖ..!

ಸೆ.1 ರಂದು ಆದೇಶದ ಕಾಪಿ ಕಳುಹಿಸಿರುವ ಇಲಾಖೆ ಬ್ಯಾಂಕ್ ನಲ್ಲಿ ಪ್ಯಾಕ್ಸ್ ಗಳಿಗೆ ಬೆಳೆ ಸಾಲ ಮಂಜೂರಾತಿಗೆ ಬ್ಯಾಂಕ್ ನ ಕಾರ್ಯದರ್ಶಿಗಳಿಗೆ, ಅಧ್ಯಕ್ಷರಿಗೆ, ಎಂಡಿಗೆ  ಮಾಮೂಲಿ ಕೊಡಬೇಕಿದೆ. 6 ನೇ ವೇತನ ಆಯೋಗದ ಶಿಫಾರಸು ಮಂಜೂರಾತಿಗೆ ಕ್ಷೇತ್ರಾಧಿಕಾರಿಗಳಿಂದ ಹಾಗೂ ಎಲ್ಲಾ ಸಿಬ್ವಂದಿಗಳಿಂದ ಹಣ ಪಡೆದು ಜಾರಿಗೆ ತರಲಾಗಿದೆ.

ಈ ಹಣವನ್ನ ಡ್ರಾ ಮಾಡಲಾಗಿದ್ದು, ಇದನ್ನ ವಿರೋಧಿಸಿದವರಿಗೆ ವರ್ಗಾವಣೆಯ ಬಿಸಿ ಮುಟ್ಟಿಸಿದ್ದಾರೆ. ಪ್ರಶ್ನಿಸಿದವರಿಗೆ ಶಿಸ್ತು ವಿಚಾರಣೆ ಭಯವನ್ನ ಹಿಟ್ಟಿಸಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪರೀಕ್ಷೆಯಲ್ಲಿ ಅವ್ಯವಹಾರದ ದೂರು

ಲಿಖಿತ ಪರೀಕ್ಷೆಯನ್ನ ನಡೆಸಲು ಸರ್ಕಾರದ ನಿಯಮಾವಳಿಯನ್ನ‌ಮೀರಿ ಅನಧಿಕೃತ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದೆ. ಪರೀಕ್ಷೆ ಹಂತದಲ್ಲೂ ಕೂಡ ಹಲವಾರು ನೂನ್ಯತೆಗಳು ಉಂಟಾಗಿರುತ್ತದೆ. 

ನೇಮಕಾತಿಯ ಯಾವುದೇ ವಿವರಗಳನ್ನ ಆಡಳಿತ ಮಂಡಳಿಯಲ್ಲಿ ಚರ್ಚಿಸಿಲ್ಲ. ಹಾಗೂ ನಿರ್ದೇಶಕರಿಗೆ ಯಾವುದೇ ಮಾಹಿತಿ ನೀಡದೆ ನಿರ್ದೇಶಕರ ಮಂಡಳಿಯ ಅನುಮೋದನೆಯನ್ನ ಸಹ ಅಧಿಕೃತವಾಗಿ ಪಡೆದಿಲ್ಲ. ಅಧಿಕೃತ ಆದೇಶ ಪಡೆಯದೆ ನೇಮಕಾತಿ ಆದೇಶ ಪಡೆದು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ.

ರಿಟ್ ಸಲ್ಲಿಸಿರುವ ಅರ್ಜಿಯಲ್ಲೂ ಸಹ ಸಮಯಾವಕಾಶ ಕೋರಿ ನೇಮಕಾತಿಯನ್ನ ಮುಂದುವರೆಸಲಾಗಿದ್ದು, ರಿಟ್ ಹಾಕಿದವರಲ್ಲಿ ಹಣವಿಲ್ಲದ ಕಾರಣ ನ್ಯಾಯಾಲಯ ಪ್ರಕ್ರಿಯೆ ಮುಂದುವರೆದಿರುವುದಿಲ್ಲ. ಕೀ ಉತ್ತರವನ್ನ ಅಭ್ಯರ್ಥಿಗಳಿಂದ ಪರೀಕ್ಷಾ ಅವಧಿ ಮುಗಿದ ಮೇಲು ಬರೆಸಲಾಗಿದೆ. ಹೀಗೆ 6 ದೂರುಗಳನ್ನ ಉಲ್ಲೇಖಿಸಿ ಸರ್ಕಾರ ಆದೇಶಿಸಿದೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!