ಶಿಕಾರಿಪುರ ಜಾಫರ್ ಕೊಲೆ ಪ್ರಕರಣ 7 ಜನ ಆರೋಪಿಗಳ ಬಂಧನ..!

ಶಿಕಾರಿಪುರ ಜಾಫರ್ ಕೊಲೆ ಪ್ರಕರಣ 7 ಜನ ಆರೋಪಿಗಳ ಬಂಧನ..!

ಶಿಕಾರಿಪುರ: ಶಿಕಾರಿಪುರ ಪಟ್ಟಣದಲ್ಲಿ ನಡೆದ ಜಾಫರ್ ಕೊಲೆ ಪ್ರಕರಣ ಸಂಭಂದಿಸಿದಂತೆ 7 ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.


ಏನಿದು ಪ್ರಕರಣ..?

ಶಿಕಾರಿಪುರ ಈದ್​ ಮಿಲಾದ್ ಕಮಿಟಿಯಲ್ಲಿ ಪ್ರತಿವರ್ಷ ಶಿಕಾರಿಪುರದ ಗಗ್ರಿ ಏರಿಯಾದವರು ಆಯ್ಕೆ ಯಾಗುತ್ತಿದ್ದರು ಈ ಬಾರಿ ಸೊಸೈಟಿ ಕೇರಿಯವರು ಅಧ್ಯಕ್ಷರಾಗಬೇಕು ಎಂಬ ವಿಚಾರಕ್ಕೆ ಗಲಾಟೆಯಾಗಿದೆ.
ಈ ವಿಚಾರದಲ್ಲಿಯೇ ಜಾಫರ್ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪುರಸಭೆಯ ಸದಸ್ಯ ದಸ್ತಗಿರ್ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಂಧಿಸಿರುವ ಆರೋಪಿಗಳು ಯಾರು..?

1) ಬಾಷಾ, 42 ವರ್ಷ ಸೊಸೈಟಿ ಕೇರಿ,
2) ರೋಷನ್, 19 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, ಹಾಲಿ ವಾಸ ಇಲಿಯಾಸ್‌ ನಗರ, ಶಿವಮೊಗ, ಟೌನ್, 3) ಸದಾಂ ಹುಸೇನ್, 31 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, ಹಾಲಿ ವಾಸ ಇಲಿಯಾಸ್‌ ನಗರ, ಶಿವಮೊಗ್ಗ ಟೌನ್, 4) ) ಸಲ್ಮಾನ್ @ ಸಲೀಂ 22 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, 5) ಇಮಾನ್, 30 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, 6) ಆರಿಫ್ ಜಾನ್, 33 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್,7) ಎಸ್‌ಎನ್ ಬಾಬು @ ಸಾಬರ್ ಅಹಮ್ಮದ್, 42 ವರ್ಷ, ವಿನಾಯಕ ನಗರ ಶಿಕಾರಿಪುರ ಟೌನ್ ಒಟ್ಟು 7ಮಂದಿಯನ್ನು ಬಂಧಿಸಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!