ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ತಹಶಿಲ್ದಾರ್ ಬಂಧನ

ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ತಹಶಿಲ್ದಾರ್ ಬಂಧನ

ಚಿಕ್ಕಮಗಳೂರು: ಸಾವಿರಾರು ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪದ ಮೇಲೆ ತಹಸಿಲ್ದಾರೊಬ್ಬರು ಬಂಧನವಾಗಿದ್ದಾರೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಉಮೇಶ್ ಬಂಧನವಾಗಿರುವ ಅಧಿಕಾರಿ ಕಡೂರು ಪೊಲೀಸರಿಂದ ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ.

ಕಡೂರು ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಸೇರಿ ಅಕ್ರಮವಾಗಿ ಮೀಸಲು ಅರಣ್ಯವನ್ನು 8 ಜನರಿಗೆ ಪರಭಾರೆ ಮಾಡಿದರು ಕಡೂರಿನಲ್ಲಿ 3500 ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದರು ಎನ್ನಲಾಗಿದೆ.

ಪ್ರಸ್ತುತ ಪ್ರಮೋಷನ್ ಆಗಿ ಕಾರವಾರ ಸೀಬರ್ಡ್ ನೌಕನೆಲೆಯಲ್ಲಿ ಭೂಸ್ವಾಧೀನ ಅಧಿಕಾರಿಯಾಗಿದ್ದರು
ಈ ಪ್ರಕರಣ ಸಂಬಂಧಿಸಿದಂತೆ ತನಿಖೆಗೆ 15 ತಹಶೀಲ್ದಾರ್ ಗಳ ತಂಡವನ್ನ ರಚಿಸಲಾಗಿತ್ತು.

ಈ ಪ್ರಕರಣ ಕುರಿತು ಕಡೂರು ಠಾಣೆಯಲ್ಲಿ ಉಮೇಶ್ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು ಇಂದು ಬೆಂಗಳೂರಿನಲ್ಲಿ ಕಡೂರು ಪೊಲೀಸರಿಂದ ಉಮೇಶ್ ಬಂಧನವಾಗಿದೆ.

News by: Santhosh Chikamagaluru

Admin

Leave a Reply

Your email address will not be published. Required fields are marked *

error: Content is protected !!