ಶಿಕಾರಿಪುರ ತಾಲ್ಲೂಕನ್ನು ಬರ ಪೀಡಿತ‌‌ ತಾಲೂಕು ಎಂದು ಘೋಷಿಸಿ: ಶಾಸಕ‌ ಬಿವೈ ವಿಜಯೇಂದ್ರ

ಶಿಕಾರಿಪುರ ತಾಲ್ಲೂಕನ್ನು ಬರ ಪೀಡಿತ‌‌ ತಾಲೂಕು ಎಂದು ಘೋಷಿಸಿ: ಶಾಸಕ‌ ಬಿವೈ ವಿಜಯೇಂದ್ರ

ಶಿಕಾರಿಪುರ: ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸುವಂತೆ ಶಾಸಕ ಬಿವೈ ವಿಜಯೇಂದ್ರ ಒತ್ತಾಯಿಸಿ ಪಟ್ಟಣದ ತಾಲೂಕ್ ಕಛೇರಿ ಎದುರು ತಾಲೂಕ್ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ‌ ತಹಶಿಲ್ದಾರ್ ಮೂಲಕ‌ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ಬಿವೈ ವಿಜಯೇಂದ್ರ ಮಾತನಾಡಿ
ರಾಜ್ಯ ಸರ್ಕಾರ ಕುಂಭಕರ್ಣನ ನಿದ್ದೆಯಲ್ಲಿದೆ ಬಡೆದೆಬ್ಬಿಸುವ ಕೆಲಸ ಈ ಹೋರಾಟದ ಮೂಲಕ ಶಿಕಾರಿಪುರ ತಾಲೂಕಿನಲ್ಲಿ ಆರಂಭವಾಗಿದೆ ರಾಜ್ಯದಲ್ಲಿ‌ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ 75-80ರಷ್ಟು ಮಳೆ ಕೊರತೆ ಕಂಡು ಬಂದಿದ್ದು ರೈತರು‌‌ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ತಾಲೂಕಿನಲ್ಲಿ ಶೇ 50% ಮೆಕ್ಕೆಜೋಳ ಬೆಳೆ ಹಾಳಗಿದೆ
ಭತ್ತ ಬಿತ್ತನೆಯಾಗಿಲ್ಲ ಏತ ನೀರಾವರಿ ಜಾರಿ ಆದರೂ ವಿದ್ಯುತ್ ಕಡಿತದಿಂದ ನೀರು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಅದರಲ್ಲೂ ಮೊದಲೇ 100 ಕೆರೆಗಳಿಗೆ ನೀರು ತುಂಬಿಸಲಾಗಿದೆ‌ ರೈತರಿಗೆ ಸರ್ಕಾರ 7-8 ತಾಸು ಸಮರ್ಪಕವಾಗಿ ವಿದ್ಯುತ್ ನೀಡಬೇಕು ಬೆಳೆ ವಿಮೆ ಕಟ್ಟಿರುವ ರೈತರಿಗೆ ತಕ್ಷಣ ಮಧ್ಯಂತರ ಬೆಳೆ ವಿಮೆ ನೀಡಬೇಕು‌ ಎಂದರು.

ಸರ್ಕಾರ ರೈತರ ಸಾಕಷ್ಟದ ಬಗ್ಗೆ ಕಾಳಜಿ ಇಲ್ಲ ರೈತರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ ಸರ್ಕಾರದ ಬಂದ ಮೊದಲನೇ ದಿನವೇ ರೈತರಿಗೆ ನೀಡುವ ಫಸಲ್ ಭೀಮಾ ಯೋಜನೆಗೆ 4000 ಹಣವನ್ನು ನಿಲ್ಲಿಸಿದ್ದಾರೆ‌.

ಶಿಕಾರಿಪುರದಲ್ಲಿ ಆರಂಭ ಆಗಿರು ಈ ಹೋರಾಟ ಮಾಜಿ‌ ಸಿಎಂ ಬಿ‌ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ರಾಜ್ಯ ವ್ಯಾಪಿ ನಡೆಯಲಿದೆ‌ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹೆಚ್ ಟಿ ಬಳಿಗಾರ್ ,ತಾಲೂಕ್ ಅಧ್ಯಕ್ಷ ವಿರೇಂದ್ರ ಪಾಟೀಲ್, ಕೆ.ಎಸ್ ಗುರುಮೂರ್ತಿ, ಪ್ರೇಮಕುಮಾರ್ ಗೌಡ, ಅಶೋಕ, ಹಾಲಪ್ಪ, ಮೋಹನ್, ಗಾಯಿತ್ರಿ ಮಲ್ಲಪ್ಪ, ನಿವೇದಿತಾ, ರೇಖಾ ಇದ್ದರು.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!