ಬಿಎಸ್ ವೈ ಆಡಳಿತದಲ್ಲಿ ಪಟ್ಟಣದ ಬಡ ಜನರಿಗೆ ಒಂದು ನಿವೇಶನವನ್ನು ನೀಡಿಲ್ಲ: ಎಸ್ ಪಿ ನಾಗರಾಜ್ ಗೌಡ

ಬಿಎಸ್ ವೈ ಆಡಳಿತದಲ್ಲಿ ಪಟ್ಟಣದ ಬಡ ಜನರಿಗೆ ಒಂದು ನಿವೇಶನವನ್ನು ನೀಡಿಲ್ಲ: ಎಸ್ ಪಿ ನಾಗರಾಜ್ ಗೌಡ

ಶಿಕಾರಿಪುರ: ಕೇಂದ್ರ ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಸರ್ಕಾರ ಪುರಸಭೆಯ ಈ ಸ್ವತ್ತು ಕೊಡುವಲ್ಲಿ ವಿಫಲವಾಗಿದೆ , ಈ ಸ್ವತ್ತು ಕೊಡುವುದಾಗಿ ಹ್ಯಾಂಡ್ ಬಿಲ್ ಮಾಡಿಸಿ ಮನೆಮನೆಗೆ ಹಂಚಿ ಚುನಾವಣೆಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಆರೋಪಿಸಿದರು.

ಪಟ್ಟಣದಲ್ಲಿ ಗುರುವಾರ ಮತಯಾಚನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು 35-40 ವರ್ಷಗಳಿಂದ ಪುರಸಭೆಯಲ್ಲಿ ಆಳ್ವಿಕೆ ನಡಸುತ್ತಿರುವ ಬಿಜೆಪಿ ಪಕ್ಷದವರು, ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದರು.

ಕಳೆದ ಪುರಸಭಾ ‌ಚುನಾವಣೆಯಲ್ಲಿ ಜನಾಭಿಪ್ರಾಯ ಕಾಂಗ್ರೆಸ್ ಪರವಾಗಿ ಇದ್ದು 12 ವಾರ್ಡ್ ಗಳಲ್ಲಿ‌ ಗೆದ್ದಿದ್ದರು ಅದರೆ ಬಿ.ಎಸ್ ಯಡಿಯೂರಪ್ಪ ‌,ಸಂಸದ ಬಿವೈ ರಾಘವೇಂದ್ರ ಅವರು ಅಪರೇಷನ್ ಮಾಡುವ ಮೂಲಕ ಅನೈತಿಕವಾಗಿ ಅಧಿಕಾರಕ್ಕೆ ಬಂದರು ಆದರೂ ಈಸ್ವತ್ತು ನೀಡಿಲ್ಲ.

ಪಟ್ಟಣದಲ್ಲಿ 1999 ಮಾಜಿ ಶಾಸಕ ಬಿ ಎನ್ ಮಹಾಲಿಂಗಪ್ಪರವರ ಅವಧಿಯಲ್ಲಿ ಬಡ ಜನತೆಗೆ ನಿವೇಶನ ಹಂಚಿಕೆಯಾಗಿದ್ದು ಬಿಟ್ಟರೆ ಇದುವರೆಗೂ ಒಂದು ನಿವೇಶನ ಹಂಚಿಕೆಯಾಗಿಲ್ಲ.

ಮಹಾಲಿಂಗಪ್ಪರವರು ನೀಡಿದ ನಿವೇಶನಗಳನ್ನೇ ನೀವು ಕೊಟ್ಟಿರುವುದಾಗಿ ಬೊಗಳೆ ಬಿಡುತ್ತಿದ್ದೀರಿ. ಇನ್ನೂ ಎಷ್ಟು ವರ್ಷಗಳ ಕಾಲ ತಾಲ್ಲೂಕಿನ ಜನತೆಗೆ ಸುಳ್ಳಿನ ಮಳೆ ಸುರಿಸುತ್ತೀರಿ. ತಾಲ್ಲೂಕಿನಲ್ಲಿ ಬಡವರಿಗೆ ನಿವೇಶನದ ಕೊರತೆ, ನೀರಿನ ಕೊರತೆ ಸೇರಿದಂತೆ ಅನೇಕ ಸಮಸ್ಯಗಳನ್ನು ಎದುರಿಸುತ್ತಿದ್ದಾರೆ.

ಅನೇಕ ಸಮಸ್ಯೆಗಳು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ಸಂಸದ ಬಿ ವೈ ರಾಘವೇಂದ್ರ, ವಿಜಯೇಂದ್ರ ರವರಿಗೆ ಏಕೆ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಾರ್ವರ್ತಿಕ ಚುನಾವಣೆ ಸಮೀಪಿಸುತ್ತಿರುವುದನ್ನು ಗಮನಿಸಿ ಪಟ್ಟಣದಲ್ಲಿ ಗುಂಪುಮನೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿ ಅವರ ಅರ್ಜಿಗಳನ್ನು ಪರಿಶೀಲಿಸುವ ನೆಪದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಜನರಿಂದ ಅರ್ಜಿ ಪಡೆದು ಮೋಸ ಮಾಡುತ್ತಿದ್ದೀರಿ ಇದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ತಾಲ್ಲೂಕನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ನೀವು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳಬೇಕು ಏಕೆಂದರೆ ನೀವು ಅಭಿವೃದ್ಧಿ ಮಾಡಲು ಹಣ ತಂದಿದ್ದು ರಾಜ್ಯದ ಜನರ ತೆರಿಗೆ ಹಣ ಅದರಲ್ಲೂ ಕಮಿಷನ್ ಪಡೆದಿದ್ದೀರಿ

ನೀರಾವರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಸಾವಿರಾರು ಕೋಟಿ ರೂಪಾಯಿ ಹಣ ತಂದು ಅದರಿಂದ ಚುನಾವಣೆಯ ಸಮಯದಲ್ಲಿ ಹುಟ್ಟುಹಬ್ಬದ ನೆಪದಿಂದ ಗೃಹಿಣಯರಿಗೆ ಸೀರೆ ಹಂಚುವುದು, ಮತದಾರರಿಗೆ ಹಣ ಹಂಚುವ ಕೆಲಸ ಮಾಡುತ್ತಿದ್ದೀರಿ ಎಂದು ಗಂಭೀರವಾಗಿ ಟೀಕಿಸಿದ ಅವರು, 40ವರ್ಷಗಳಿಂದ ಜನರನ್ನು ಮೋಸ ಮಾಡಿದ್ದು ಸಾಕು ಇನ್ನು ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ ಮತದಾರರು ಜಾಗೃತರಾಗಿದ್ದಾರೆ ಎಂದರು.

ಈ ವೇಳೆ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡರವರಿಂದ ನಗರದಾದ್ಯಂತ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಪಾರಿವಾಳದ ಶಿವರಾಂ, ಎಪಿಎಂಸಿ ನಿರ್ದೇಶಕ ನಗರದ ರವೀಂದ್ರ, ಮಾಜಿ ಎನ್ಎಸ್ ಯು ಐ ಅಧ್ಯಕ್ಷ ಶಿವು ಹುಲ್ಮಾರ್, ಎನ್ .ನಿಂಗಪ್ಪ , ಪಚ್ಚಿ ಸಂದೀಪ್ ವಿವೇಕ್,ಪ್ರದೀಪ್, ಇದ್ದರು‌.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!